Job Description: * ಪ್ರಸ್ತುತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹುಡುಕಲು ಸುಲಭವಾಗುವಂತೆ "ಇವಿ ಮಿತ್ರ" ಎನ್ನುವ ಅಪ್ಲಿಕೇಷನ್‌(ಆಯಪ್)ನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಬಿಡುಗಡೆ ಮಾಡಿದೆ. * ಬೆಸ್ಕಾಂ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಎಲೆಕ್ಟ್ರಿಕಲ್ ವಾಹನ ಚಾರ್ಜಿಂಗ್‌ಗಾಗಿ ಬೆಂಗಳೂರು ನಗರದಲ್ಲಿ 74 ಸ್ಥಳಗಳಲ್ಲಿ 136 ಪೋರ್ಟ್ಸ್‌ಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಈ ಮೊಬೈಲ್ ಅಪ್ಲಿಕೇಷನ್ ಬಳಸುವದರಿಂದ ಹತ್ತಿರದ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳು ಎಲ್ಲಿವೆ ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ. * ಈ ಸ್ಟೇಷನ್‌ಗಳು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೂ ತೆರೆದಿರುತ್ತವೆ, ಹಾಗೂ ಈ ಚಾರ್ಜಿಂಗ್‌ ಸ್ಟೇಷನ್‌ಗಳಲ್ಲಿ AC001 ಹಾಗೂ DC001 ಚಾರ್ಜರ್ ಮಾಡೆಲ್‌ಗಳಿವೆ, ಹಾಗೂ ಮುಂದಿನ ಕೆಲ ತಿಂಗಳುಗಳಲ್ಲಿ ನಗರದಲ್ಲಿ ಸರಿ ಸುಮಾರು 300 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲಾಗುತ್ತದೆ ಎಂದು ತಿಳಿಸಿದ್ದಾರೆ, ಸದ್ಯ ಈ "ಇವಿ ಮಿತ್ರ" ಅಪ್ಲಿಕೇಷನ್ ಆಂಡ್ರಾಯ್ಡ್‌ ಹಾಗೂ ಐಒಎಸ್(IOS) ಮೊಬೈಲ್‌ಗಳಲ್ಲಿ ಕೂಡ ಲಭ್ಯವಿದೆ.