Job Description: * ಪ್ರಸ್ತುತ ಚೌದರಿ ಚರಣಸಿಂಗ್‌ ಅವರು ದೇಶದ 5ನೇ ಪ್ರಧಾನಮಂತ್ರಿ, ಇವರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಹಾಗೂ ರೈತರ ಏಳಿಗೆಗೆ ಶ್ರಮಿಸಿದ್ದಾರೆ. ಚೌದರಿ ಚರಣಸಿಂಗ್‌ ಅವರ ಜನ್ಮದಿನದ ಸ್ಮರಣಾರ್ಥ ಈ 'ರಾಷ್ಟ್ರೀಯ ರೈತರ ದಿನಾಚರಣೆ' ಆಚರಿಸಲಾಗುತ್ತದೆ. * ದೇಶದ 5ನೇ ಪ್ರಧಾನಮಂತ್ರಿ ಚೌದರಿ ಚರಣಸಿಂಗ್‌ ಅವರು 1902 ರ ಡಿಸೆಂಬರ್‌. 23 ರಲ್ಲಿ ಉತ್ತರ ಪ್ರದೇಶದ ಮೀರತ್‌ ಜನಿಸಿದ್ದಾರೆ. * ರೈತರು ಮತ್ತು ಕೃಷಿಕರ ರಾಷ್ಟ್ರೀಯ ಕೊಡುಗೆಗಳನ್ನು ಪರಿಗಣಿಸಿ ವಿವಿಧ ದೇಶಗಳಲ್ಲಿ ರೈತರ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ, ಭಾರತ ದೇಶದಲ್ಲಿ ಡಿಸೆಂಬರ್. 23 ರಂದು ರೈತರ ದಿನವನ್ನು ಆಚರಿಸಲಾಗುತ್ತದೆ. * ದೇಶವಾರು ಪಟ್ಟಿ: - ಘಾನಾ: ಪಶ್ಚಿಮ ಆಫ್ರಿಕಾದ ದೇಶವಾಗಿರುವ ಘಾನಾ ದೇಶದಲ್ಲಿ ರಾಷ್ಟ್ರೀಯ ರೈತರ ದಿನವನ್ನು ರೈತರು ಮತ್ತು ಮೀನುಗಾರರ ದಿನವಾಗಿ ವಾರ್ಷಿಕ ಆಚರಣೆಯಾಗಿದೆ, ಈ ದಿನವನ್ನು ಡಿಸೆಂಬರ್ ಮೊದಲ ಶುಕ್ರವಾರದಂದು ಆಚರಣೆ ಮಾಡುತ್ತಾರೆ. ಘಾನಾ ದೇಶದಲ್ಲಿ ರೈತರ ದಿನದಂದು ಅಲ್ಲಿನ ಆಹಾರ ಮತ್ತು ಕೃಷಿ ಸಚಿವಾಲಯವು ಅರ್ಹ ರೈತರು ಮತ್ತು ಮೀನುಗಾರರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. - ಭಾರತ: ಭಾರತದಲ್ಲಿ ರಾಷ್ಟ್ರೀಯ ರೈತರ ದಿನವನ್ನು ಹಿಂದಿಯಲ್ಲಿ ಕಿಸಾನ್ ದಿವಸ್ ಎಂದು ಕರೆಯುತ್ತಾರೆ, ಭಾರತದಲ್ಲಿ ಪ್ರತಿ ವರ್ಷವು ಡಿಸೆಂಬರ್. 23 ರಂದು ರೈತರ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತದ 5 ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರು ರೈತ ನಾಯಕರಾಗಿದ್ದರು ಅಷ್ಟೇ ಅಲ್ಲದೇ ಭಾರತೀಯ ರೈತರ ಜೀವನವನ್ನು ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದರು, ಇವರ ಜನ್ಮದಿನದ ಅಂಗವಾಗಿ ಡಿಸೆಂಬರ್. 23 ರಂದು ರೈತರ ದಿನವನ್ನು ಆಚರಣೆ ಮಾಡಲಾಗುತ್ತದೆ. - ಪಾಕಿಸ್ತಾನ: ಪಾಕಿಸ್ತಾನದಲ್ಲಿ ರಾಷ್ಟ್ರೀಯ ರೈತರ ದಿನವನ್ನು ಕಿಸ್ಸಾನ್ ದಿನ ಎಂದೂ ಕರೆಯಲಾಗುತ್ತದೆ, ಪಾಕಿಸ್ತಾನ ದೇಶದಲ್ಲಿ 2019 ರ ಡಿಸೆಂಬರ್.18 ರಂದು ಮೊದಲ ಬಾರಿಗೆ ಇಸ್ಲಾಮಾಬಾದ್‌ನಲ್ಲಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಡಿಸೆಂಬರ್.18'ನ್ನು ಪಾಕಿಸ್ತಾನದ ಮೊದಲ ರೈತರ ದಿನವನ್ನು ಅಂಗೀಕರಿಸಿದ್ದಾರೆ. -ದಕ್ಷಿಣ ಕೊರಿಯಾ: ದಕ್ಷಿಣ ಕೊರಿಯಾದಲ್ಲಿ ನವೆಂಬರ್. 11 ರಂದು ರೈತರ ದಿನವನ್ನು ಆಚರಣೆ ಮಾಡುತ್ತಾರೆ, ಹಾಗೂ ಅದೇ ದಿನದ ಪೆಪೆರೊ ದಿನದೊಂದಿಗೆ ಸ್ಪರ್ಧಿಸುತ್ತದೆ. - ಯುನೈಟೆಡ್ ಸ್ಟೇಟ್ಸ್: ಅಮೇರಿಕದಲ್ಲಿ ಪ್ರತಿ ವರ್ಷ ಅಕ್ಟೋಬರ್. 12 ರಂದು ರೈತರ ದಿನವನ್ನು ಆಚರಣೆ ಮಾಡುತ್ತಾರೆ. - ಜಾಂಬಿಯಾ: ಜಾಂಬಿಯಾ ದೇಶದಲ್ಲಿ ಆಗಸ್ಟ್‌ನ ಮೊದಲ ಸೋಮವಾರದ ದಿನದಂದು ರಾಷ್ಟ್ರೀಯ ರೈತರ ದಿನವನ್ನು ಆಚರಣೆ ಮಾಡುತ್ತಾರೆ.