Job Description: * ಪ್ರಸ್ತುತ ಆಹಾರ ಬುಟ್ಟಿಯನ್ನು ವೈವಿಧ್ಯಗೊಳಿಸಲು ನೀತಿ (NITI) ಆಯೋಗ ಹಾಗೂ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (UN WEP) ಈ ಎರಡು ಸಂಸ್ಥೆಗಳು ಒಪ್ಪಂದ ಮಾಡಿಕೊಂಡು ಸಹಿ ಹಾಕಿವೆ. * ನೀತಿ ಆಯೋಗ ಮತ್ತು UN WEP ನಡುವಿನ ಈ ಒಪ್ಪಂದವು 2023 ನ್ನು ಅಂತರರಾಷ್ಟ್ರೀಯ ರಾಗಿ ವರ್ಷವೆಂದು ಗುರುತಿಸುವದರ ಜೊತೆಗೆ ಜ್ಞಾನ ವಿನಿಮಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆ ಸಾಧಿಸಲು ಭಾರತವನ್ನು ಬೆಂಬಲವನ್ನು ನೀಡಲಿದೆ ಎಂದಿದ್ದಾರೆ, ಈ ಪಾಲುದಾರಿಕೆಯಿಂದಾಗಿ ಸಣ್ಣ-ರೈತರಿಗೆ ಬೆಳೆಯಲು ಜೀವನೋಪಾಯವನ್ನು ನಿರ್ಮಿಸಿಕೊಳ್ಳಲು, ಹಾಗೂ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ. * ರಾಗಿ ರಾಷ್ಟ್ರೀಯ ವರ್ಷ: ರಾಗಿ ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು 2018 ನ್ನು ರಾಗಿ ವರ್ಷವಾಗಿ ಆಚರಣೆ ಮಾಡಿದೆ, ಹಾಗೂ 2023ನ್ನು ಅಂತರರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಲು UNGA ನಿರ್ಣಯವನ್ನು ಮುನ್ನಡೆಸಿದೆ. * ರಾಗಿಯನ್ನು ಉತ್ತೇಜಿಸಲು ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿವೆ: - ಶ್ರೇಷ್ಠತೆಯ ಕೇಂದ್ರ ಸ್ಥಾಪನೆ, - ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯೊಂದಿಗೆ ಪೌಷ್ಟಿಕ ಧಾನ್ಯಗಳ ಏಕೀಕರಣ ಮತ್ತು - ಬಹು ರಾಜ್ಯಗಳಲ್ಲಿ ರಾಗಿ ಮಿಷನ್ ಸ್ಥಾಪನೆ.