Job Description: * ಪ್ರಸ್ತುತ ಕೇರಳದ 'ಸಿಲ್ವರ್‌ಲೈನ್ ಯೋಜನೆ' ವಿರುದ್ಧ ಕೇರಳ ಜನಕೀಯ ಸಮಿತಿಯಂತಹ ಹಲವಾರು ರಾಜಕೀಯ ಪಕ್ಷಗಳು, ಹಾಗೂ ನಾಗರಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ, ಅಷ್ಟೇ ಅಲ್ಲದೇ ಸಂಸದರು ಈ ಯೋಜನೆಯ ವಿರುದ್ಧ ಮನವಿಗೆ ಸಹಿ ಹಾಕಿದ್ದಾರೆ, ತಯಾರಿಕೆಯಲ್ಲಿ 'ಖಗೋಳ ಹಗರಣ' ಇದೆ ಹಾಗೂ ಇದು ರಾಜ್ಯವನ್ನು ಮತ್ತಷ್ಟು ಸಾಲದ ಸುಳಿಗೆ ನೂಕಲಿದೆ ಎಂದು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ಈ ಯೋಜನೆಯಿಂದಾಗಿ ಹೆಚ್ಚಿನ ಪರಿಸರ ಹಾನಿಯಾಗಲಿದೆ ಎಂದು ಅಲ್ಲಿನ ಪರಿಸರವಾದಿಗಳು ತಿಳಿಸಿದ್ದಾರೆ, ಕಾರಣ ಈ ಸಿಲ್ವರ್‌ಲೈನ್ ಯೋಜನೆ ಮಾರ್ಗವು ಜೌಗು ಪ್ರದೇಶಗಳು, ಭತ್ತದ ಗದ್ದೆಗಳು ಹಾಗೂ ಬೆಟ್ಟಗಳ ಮೂಲಕ ಹಾದುಹೋಗುತ್ತದೆ ಎಂದು ತಿಳಿಸಿದ್ದಾರೆ. * 'ಸಿಲ್ವರ್‌ಲೈನ್ ಯೋಜನೆ'ಯು ಇದೊಂದು ಅರೆ ವೇಗದ ರೈಲ್ವೆ ಯೋಜನೆಯಾಗಿದೆ, ಈ ಯೋಜನೆಯು ಕೇರಳದ ಉತ್ತರ ಹಾಗೂ ದಕ್ಷಿಣದ ತುದಿಗಳ ಮಧ್ಯೆ ಗಂಟೆಗೆ 200 ಕಿಮೀ ವೇಗದಲ್ಲಿ ಚಲಿಸುವ ರೈಲುಗಳನ್ನು ಕಲ್ಪಿಸುಸುವ ಯೋಜನೆಯಾಗಿದೆ ಇದಕ್ಕೆ ಅಂದಾಜು 63,940 ಕೋಟಿ ರೂ. ವೆಚ್ಚ ತಗುಲಲಿದೆ, ಈ ಅರೆ ವೇಗದ ರೈಲ್ವೆ ಯೋಜನೆಯಿಂದಾಗಿ ರೈಲು-ಸಂಪರ್ಕವು ಸುಮಾರು 529.45 ಕಿ ಮೀ ಅಂದರೆ ತಿರುವನಂತಪುರ ದಿಂದ ಕಾಸರಗೋಡಿಗೆ ಸಂಪರ್ಕವನ್ನು ಕಲ್ಪಿಸಲಿದೆ. ಈ ರೈಲು ಯೋಜನೆಯು 11 ಠಾಣೆಗಳ ಮೂಲಕ 11 ಜಿಲ್ಲೆಗಳನ್ನು ಸಂಪರ್ಕಿಸಲಿದೆ. * 'ಕೇರಳ ರೈಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ (KRDCL)' ಈ ಅರೆ ವೇಗದ ರೈಲು ಯೋಜನೆಯನ್ನ ಕಾರ್ಯಗತಗೊಳಿಸುತ್ತಿದೆ, ಪ್ರಸ್ತುತ ಕೇರಳ ಸರ್ಕಾರ ಹಾಗೂ ಕೇಂದ್ರ ರೈಲ್ವೇ ಸಚಿವಾಲಯದ ಜಂಟಿ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿವೆ. * ಈ ಯೋಜನೆಯು ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (EMU) ಮಾದರಿಯ ರೈಲುಗಳನ್ನು ಓಡಿಸಲಾಗುತ್ತದೆ, ಹಾಗೂ ಸ್ಟ್ಯಾಂಡರ್ಡ್ ಗೇಜ್ ಟ್ರ್ಯಾಕ್‌ನಲ್ಲಿ ರೈಲುಗಳು ಗಂಟೆಗೆ ಗರಿಷ್ಠ 220 ಕಿ ಮೀ ವೇಗದಲ್ಲಿ ಚಲಿಸುತ್ತವೆ ಎಂದು KRDCL ತಿಳಿಸಿದೆ.