Job Description: * ಪ್ರಸ್ತುತ ಸಾರ್ಕ್‌ ಶೃಂಗದ ಪ್ರಧಾನ ಕಾರ್ಯದರ್ಶಿಯಾಗಿರುವ ಇಸಾಲಾ ರುವನ್‌ ವೀರಕೂನ್‌ ಅವರು ಇದೇ ಡಿಸೆಂಬರ್. 22 ರಿಂದ ನಾಲ್ಕು(4) ದಿನಗಳ ಕಾಲ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದ್ದಾರೆ, ಅದೇ ಸಂಧರ್ಭದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, ಹಾಗೂ ಅಲ್ಲಿನ ವಿದೇಶಾಂಗ ಸಚಿವವರ ಜೊತೆ ಮಾತುಕತೆಯನ್ನು ನಡೆಸಲಿದ್ದಾರೆ. * ಇಸಾಲಾ ರುವನ್‌ ವೀರಕೂನ್‌ ಅವರು ಈ ಹಿಂದೆ 2020 ರ ಮಾರ್ಚ್‌ ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದರೆ, ಇದೇ ಇವರ ಮೊದಲ ಭೇಟಿಯಾಗಿದೆ, ಇವರ ಈ ಭೇಟಿಯಲ್ಲಿ ಸಾರ್ಕ್‌ ರಾಷ್ಟ್ರಗಳ ವಲಯದಲ್ಲಿ ಶಾಂತಿ ಸ್ಥಾಪನೆ, ಭದ್ರತೆ ಹಾಗೂ ಅಭಿವೃದ್ಧಿಗೆ ಒತ್ತು ನೀಡುವ ಬಗ್ಗೆ ಮಾತುಕತೆ ನಡೆಯುವ ಸಾಧ್ಯೆತೆಗಳಿವೆ ಎಂದಿದ್ದಾರೆ. * ಸಾರ್ಕ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳಲ್ಲಿ '8' ರಾಷ್ಟ್ರಗಳಿವೆ. ಈ ಹಿಂದೆ 2014 ರ ಕಠ್ಮಂಡುವಿನ ಸಾರ್ಕ್‌ ಶೃಂಗಸಭೆ ಜರುಗಿದೆ, ಮತ್ತೇ ಶೃಂಗಸಭೆ ನಡೆದಿಲ್ಲ, ಈ ಹಿನ್ನಲೆಯಿಂದಾಗಿ 2016 ರ ನಂತರ ಸಾರ್ಕ್ ಶೃಂಗಸಭೆ ಕಾರ್ಯ ಅಷ್ಟು ಪರಿಣಾಮಕಾರಿಯಾಗಿಲ್ಲ ಎಂದು ತಿಳಿದು ಬಂದಿದೆ. * ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋಆಪರೇಷನ್ (SAARC): ಎಂಬುದು ಪ್ರಾದೇಶಿಕ ಅಂತರಸರ್ಕಾರಿ ಸಂಸ್ಥೆ ಮತ್ತು ದಕ್ಷಿಣ ಏಷ್ಯಾದ ರಾಜ್ಯಗಳ ಭೌಗೋಳಿಕ ರಾಜಕೀಯ ಒಕ್ಕೂಟವಾಗಿದೆ. ಸಾರ್ಕ್(SAARC) ಸದಸ್ಯ ರಾಷ್ಟ್ರಗಳು: ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ. * ಸಾರ್ಕ್(SAARC)ನ್ನು: 1985 ರ ಡಿಸೆಂಬರ್. 08 ರಂದು ಬಾಂಗ್ಲಾದೇಶದ ಢಾಕಾದಲ್ಲಿ ಸ್ಥಾಪಿಸಲಾಯಿತು, ಈ ಸಂಸ್ಥೆಯು ಆರ್ಥಿಕ ಮತ್ತು ಪ್ರಾದೇಶಿಕ ಏಕೀಕರಣದ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ, ಹಾಗೂ 2006 ರಲ್ಲಿ ದಕ್ಷಿಣ ಏಷ್ಯಾದ ಮುಕ್ತ ವ್ಯಾಪಾರ ಪ್ರದೇಶವನ್ನು ಆರಂಭಿಸಿದೆ, ಹಾಗೂ ಈ ಸಾರ್ಕ್ ಸಂಸ್ಥೆಯು ವಿಶ್ವಸಂಸ್ಥೆಯಲ್ಲಿ ವೀಕ್ಷಕರಾಗಿ ಶಾಶ್ವತ ರಾಜತಾಂತ್ರಿಕ ಕಾರ್ಯಗಳನ್ನು ನಿರ್ವಹಿಸುವದರ ಜೊತೆಗೆ ಯುರೋಪಿಯನ್ ಒಕ್ಕೂಟ ಸೇರಿ ಬಹುಪಕ್ಷೀಯ ಘಟಕಗಳೊಂದಿಗೆ ಸಂಪರ್ಕವನ್ನು ಅಭಿವೃದ್ಧಿಪಡಿಸಿದೆ.