Job Description: * ಇತ್ತೀಚಿಗೆ ಕ್ರೀಡಾಕ್ಷೇತ್ರದಲ್ಲಿ ಉದ್ದೀಪನ ಮದ್ದು (ಮಾದಕವಸ್ತು) ಸೇವನೆ ಮಿತಿಮೀರಿದ ಪ್ರಕರಣ, ಹಾಗೂ ನಿಯಮ ಉಲ್ಲಂಘನೆಯಲ್ಲಿ ಭಾರತವು 3 ನೇ ಸ್ಥಾನದಲ್ಲಿದೆ. ಇದೀಗ ವಿಶ್ವ ಮಾದಕವಸ್ತು ಮದ್ದು ತಡೆ (WADA) ಸಂಸ್ಥೆ ಪ್ರಕಟಿಸಿರುವ 2019 ರ ಪಟ್ಟಿಯಲ್ಲಿ ಭಾರತವು 3ನೇ ಸ್ಥಾನದಲ್ಲಿ, ಇದಕ್ಕೂ ಮೊದಲು ಭಾರತ 4 ನೇ ಸ್ಥಾನದಲ್ಲಿತ್ತು. * ಸದ್ಯ ಭಾರತದಲ್ಲಿ ಒಟ್ಟು 152 ಪ್ರಕರಣಗಳು ವರದಿಯಾಗಿವೆ, ಇದು ವಿಶ್ವದ ಒಟ್ಟು ಪ್ರಕರಣಗಳ ಪೈಕಿ ಶೇ. 17 ರಷ್ಟು ಎಂದು ವರದಿಯಾಗಿದೆ. ಈ ಪಟ್ಟಿಯಲ್ಲಿ ದೇಹದಾರ್ಢ್ಯ ಪಟುಗಳೇ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿದ್ದಾರೆ, ಸುಮಾರು 57 ದೇಹದಾರ್ಢ್ಯ ಪಟುಗಳು, ಹಾಗೂ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ವೇಟ್‌ ಲಿಫ್ಟಿಂಗ್ 25, ಅಥ್ಲೆಟಿಕ್ಸ್‌ ನಲ್ಲಿ 20, ಹಾಗೂ ಕುಸ್ತಿಯಲ್ಲಿ 10, ಬಾಕ್ಸಿಂಗ್ ಹಾಗೂ ಜುಡೊ ಕ್ರೀಡೆಗಳಲ್ಲಿ ತಲಾ 4, ಪ್ರಕರಣಗಳು ವರದಿಯಾಗಿವೆ, ಇವರಷ್ಟೇ ಅಲ್ಲದೇ 4 ಕ್ರಿಕೆಟ ಪಟುಗಳು ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. * ವಿಶ್ವ ಮಾದಕವಸ್ತು ಮದ್ದು ತಡೆ ಸಂಸ್ಥೆ ಪ್ರಕಟಿಸಿರುವ 2019 ರ ಪಟ್ಟಿಯ ಪ್ರಕಾರ: ರಷ್ಯಾ 167 ಪ್ರಕರಣಗಳು, ಇಟಲಿ 157 ಪ್ರಕರಣಗಳು ಇದೀಗ ಈ ಎರಡು ದೇಶಗಳು ಒಂದು ಮತ್ತು ಎರಡನೇ ಸ್ಥಾನಗಳಲ್ಲಿವೆ, ಭಾರತ 152 ಪ್ರಕರಣಗಳು, ಬ್ರೆಜಿಲ್ 78, ಹಾಗೂ ಇರಾನ್ 70 ಪ್ರಕರಣಗಳು ಈ ದೇಶಗಳು ಕ್ರಮವಾಗಿ ಮೂರೂ, ನಾಲ್ಕು, ಮತ್ತು ಐದನೇ ಸ್ಥಾನದಲ್ಲಿವೆ. * ರಷ್ಯಾ ದೇಶದಲ್ಲಿ ಅತೀ ಹೆಚ್ಚು ಮಾದಕವಸ್ತು ಸೇವನೆ ಪ್ರಕರಣಗಳು ವರದಿಯಾಗಿರುವ ಹಿನ್ನಲೆಯಿಂದಾಗಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂಡಕ್ಕೆ ಭಾಗವಹಿಸಲು ಅರ್ಹತೆಯನ್ನು ನೀಡಿದ್ದಿಲ್ಲ. * ಭಾರತವು ಈ ಹಿಂದೆ 2018 ರಲ್ಲಿ 107 ಪ್ರಕರಣಗಳನ್ನು ವರದಿಯಾಗಿ 4 ನೇ ಸ್ಥಾನದಲ್ಲಿತ್ತು. * ವರ್ಷ ವರ್ಷಕ್ಕೆ ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್, ಹಾಗೂ ದೇಹದಾರ್ಢ್ಯ ಕ್ರೀಡೆಗಳಲ್ಲಿ ಮಾದಕವಸ್ತು (ಮದ್ದು) ಸೇವನೆ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ, ಹಾಗೂ ಇದು ಕಳವಳಕಾರಿ ಸಂಗತಿಯಾಗಿದೆ ಎಂದು ವಿಶ್ವ ಮಾದಕವಸ್ತು ಮದ್ದು ತಡೆ ಸಂಸ್ಥೆ ತಿಳಿಸಿದೆ.