Job Description: * ಪ್ರಸ್ತುತ ಭಾರತೀಯ ಮೂಲದ ಉಜ್ರಾ ಝೇಯಾ ಅವರನ್ನು ಟಿಬೆಟ್‌ ವಿಚಾರಗಳ ಚರ್ಚೆಗಾಗಿ ಸಮನ್ವಯಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಇವರು ಅಮೇರಿಕದ ವಿದೇಶಾಂಗ ಸಚಿವಾಲಯದಲ್ಲಿ ಉಪ ಸಚಿವೆಯಾಗಿದ್ದಾರೆ. * ಇದೀಗ ಮತ್ತೂಬ್ಬ ಭಾರತದ ಮೂಲದ ಮಹಿಳೆ ಅಮೇರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಸರ್ಕಾರದಲ್ಲಿ ಹುದ್ದೆಯನ್ನು ಅಲಂಕರಿಸಿದ್ದಾಳೆ. * ಉಜ್ರಾ ಝೇಯಾ ಅವರು ಟಿಬೆಟ್‌ ಬಿಕ್ಕಟ್ಟಿನ ವಿಷಯಗಳಿಗೆ ಸಂಬಂಧಿಸಿದಂತೆ ಚೀನಾ ಹಾಗೂ ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ಅವರ ನಡುವೆ ಪೂರ್ವ ಷರತ್ತುಗಳಿಲ್ಲದೆ ಚರ್ಚೆಯನ್ನು ನಡೆಸುವ ವಾತಾವರಣ ಸೃಷ್ಟಿಸುವ ಅಧಿಕಾರವನ್ನು ಹೊಂದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕೆನ್ ಅವರು ತಿಳಿಸಿದ್ದಾರೆ. * ಇದೀಗ ಚೀನಾ ದೇಶವು ಟಿಬೆಟ್‌ನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂಬ ಆರೋಪದ ಹೊಣೆಯನ್ನು ಹೊತ್ತಿದೆ. ಆದರೆ ಚೀನಾ ಈ ಆರೋಪವನ್ನು ತಳ್ಳಿಹಾಕಿದೆ. * ಕ್ಸಿ ಜಿನ್‌ಪಿಂಗ್‌ ಅವರು ಈ ಹಿಂದೆ 2013 ರಲ್ಲಿ ಅಧ್ಯಕ್ಷರಾದ ನಂತರ ಟಿಬೆಟ್‌ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.