Job Description: * ಪ್ರಸ್ತುತ ಪಾಕಿಸ್ತಾನದಿಂದ ಭಾರತ ವಿರೋಧಿ ಪ್ರಚಾರವನ್ನು ನಡೆಸುತ್ತಿರುವ ಆರೋಪದ ಹಿನ್ನೆಲೆಯಿಂದಾಗಿ '20' ಯುಟ್ಯೂಬ್ ಚಾನೆಲ್‌ಗಳು, ಹಾಗೂ '2' ಎರಡು ವೆಬ್‌ಸೈಟ್‌ಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ. * ಇದೀಗ ಕೇಂದ್ರ ಸರ್ಕಾರವು ನಿಷೇಧಿಸಿರುವ ಚಾನೆಲ್‌ಗಳಲ್ಲಿ ನಯಾ ಪಾಕಿಸ್ತಾನ ಗ್ರೂಪ್‌ಗೆ ಸೇರಿರುವ ಚಾನೆಲ್‌ಗಳು: ಪಂಚ್ ಲೈನ್, ಇಂಟರ್ನ್ಯಾಷನಲ್ ವೆಬ್ ನ್ಯೂಸ್, ದಿ ನೇಕೆಡ್ ಟ್ರೂತ್, ಫಿಕ್ಷನಲ್, 48 ನ್ಯೂಸ್, ಐತಿಹಾಸಿಕ ಸಂಗತಿಗಳು ಮತ್ತು ಕವರ್ ಸ್ಟೋರಿ, ಇನ್ನು ಹೀಗೆ ಹಲವಾರು ಚಾನಲ್'ಗಳು ನಿಷೇದವಾಗಿವೆ. ಇತ್ತೀಚಿಗೆ ಫೆಬ್ರವರಿಯಲ್ಲಿ ಜಾರಿಗೆ ತರಲಾಗಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಸಚಿವಾಲಯದ ಆದೇಶದ ಅಡಿಯಲ್ಲಿ ಇದು ಮೊದಲನೇಯದ್ದಾಗಿದೆ. * ಕೇಂದ್ರ ಸರ್ಕಾರ ನಿಷೇಧಿಸಿರುವ ಈ ಯುಟ್ಯೂಬ್ ಚಾನೆಲ್‌ಗಳು ಅಂದಾಜು 35 ಲಕ್ಷ ಚಂದಾದಾರನ್ನು ಹೊಂದಿವೆ, ಈ ಎಲ್ಲ ಚಾನಲ್'ಗಳಲ್ಲಿ ಭಾರತಕ್ಕೆ ಸಂಬಂಧಪಟ್ಟಿರುವ ವಿಷಯಗಳನ್ನು 50 ಕೋಟಿ. ಗೂ. ಹೆಚ್ಚು ಬಾರಿ ವೀಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. * ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿಯಾಗಿರುವ ಅಪೂರ್ವಚಂದ್ರ ಅವರು ಈ ಯುಟ್ಯೂಬ್ ಚಾನೆಲ್‌ಗಳಲ್ಲಿ ಭಾರತದ ಸಾರ್ವಭೌಮತೆ, ಹಾಗೂ ಸಮಗ್ರತೆಗೆ ಧಕ್ಕೆಯನ್ನು ತರಲಾಗುತ್ತಿದೆ ಇವುಗಳನ್ನು ತಕ್ಷಣದಿಂದಲೇ ತಡೆಯುವಂತೆ ನಿರ್ದೇಶ ನೀಡಿ ಯುಟ್ಯೂಬ್ ಮತ್ತು ದೂರಸಂಪರ್ಕ ಇಲಾಖೆಗೆ ಪತ್ರ ಬರೆಯುವ ಮೂಲಕ ಮಾಹಿತಿ ರವಾನಿಸಿದ್ದರು. * ಪಾಕಿಸ್ತಾನದ ISI ಸಹಾಯದಿಂದ ಈ ಆನ್‌ಲೈನ್ ಅಪಪ್ರಚಾರವನ್ನು ನಡೆಸಲಾಗುತ್ತಿತ್ತು ಎಂದಿದ್ದಾರೆ. ಇದೀಗ ಭಾರತ ವಿರೋಧಿ ಪ್ರಚಾರದಲ್ಲಿ ಪಾಲ್ಗೊಂಡಿರುವ ವೆಬ್‌ಸೈಟ್‌ಗಳ ಮೇಲೆ ನಿಷೇಧ ಹೇರಲು ಇದೇ ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನ ನಿಯಮಗಳು,2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಉಲ್ಲೇಖಿಸಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.