Job Description: * ಪ್ರಸ್ತುತ ಉತ್ತರ ಪ್ರದೇಶ ರಾಜ್ಯದಲ್ಲಿನ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಸರ್ಕಾರ ಮುಂದಿನ '6' ತಿಂಗಳ ಕಾಲ ಎಲ್ಲ ಮುಷ್ಕರಗಳನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದ್ದಾರೆ. ಇದೀಗ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಡಾ.ದೇವೇಶ್ ಕುಮಾರ್ ಚತುರ್ವೇದಿ ಅವರು ಈ ಅಧಿಸೂಚನೆಯ ಆದೇಶವನ್ನು ಹೊರಡಿಸಿದ್ದಾರೆ. * ಈ ಅಧಿಸೂಚನೆಯ ಆದೇಶದ ಪ್ರಕಾರ ಯಾವುದೇ ಸರ್ಕಾರಿ ಸೇವೆ, ನಿಗಮಗಳು ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಮುಷ್ಕರವನ್ನು ನಡೆಸುವಹಾಗಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಈ ನಿಷೇಧವನ್ನು ಉಲ್ಲಂಘಿಸಿದ್ದೇ ಆದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಯೋಗಿ ಸರ್ಕಾರವು ಎಚ್ಚರಿಕೆ ನೀಡಿದೆ. * ಉತ್ತರ ಪ್ರದೇಶ ರಾಜ್ಯ ಸರ್ಕಾರವು ಈ ಹಿಂದೆ ಮೇ ತಿಂಗಳಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ (ಎಸ್ಮಾ) ಹೇರಿ ಮುಷ್ಕರಗಳಿಗೆ ನಿಷೇಧ ಹೇರಿತ್ತು, ಮೇ ತಿಂಗಳಲ್ಲಿ ಹೊರಡಿಸಿದ ಆದೇಶದ ಪ್ರಕಾರ 2020ರ ನವೆಂಬರ್‌ವರೆಗೆ ಮುಷ್ಕರಗಳನ್ನು ನಿಷೇಧಿಸಲಾಗಿತ್ತು. ಈ ಎಸ್ಮಾ ಕಾಯ್ದೆಯಡಿ ಸರ್ಕಾರ ಮುಷ್ಕರ ನಿರತ ಅಥವಾ ಸಾಮಾನ್ಯ ಜನಜೀವನ ನಿರ್ವಹಿಸಲು ಅಗತ್ಯವಾದ ಸೇವೆಗಳನ್ನು ನಿರಾಕರಿಸುವ ಸಿಬ್ಬಂದಿಗಳ ಯಾವುದೇ ಕರುಣೆ ತೋರದೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿತ್ತು. ಪೊಲೀಸರು ಯಾವುದೇ ವಾರೆಂಟ್ ಇಲ್ಲದೇ ಎಸ್ಮಾ ಉಲ್ಲಂಘಿಸಿದವರನ್ನು ಬಂಧಿಸುವ ಅವಕಾಶವಿದೆ, ಬಂಧಿಸಲಾಗಿರುವವರಿಗೆ ಒಂದು ವರ್ಷದವರೆಗೆ ಜೈಲು ಅಥವಾ 1000 ರೂ. ದಂಡ, ಒಂದು ವೇಳೆ ಎರಡನ್ನೂ ವಿಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ. * Essential Services Maintenance Act (ಎಸ್ಮಾ): ESMA ಎಂಬುದು ಭಾರತದ ಸಂವಿಧಾನದ 7ನೇ ಶೆಡ್ಯೂಲ್‌ನ ಸಮಕಾಲೀನ ಪಟ್ಟಿಯಲ್ಲಿ ಪಟ್ಟಿ ಸಂಖ್ಯೆ 33 ರ ಅಡಿಯಲ್ಲಿ ಭಾರತದ ಸಂಸತ್ತು ಮಾಡಿರುವ ಕಾನೂನಾಗಿದೆ. ಇದೊಂದು ಭಾರತದ ಸಂಸತ್ತಿನ ಒಂದು ಕಾಯಿದೆಯಾಗಿದೆ, ಇದನ್ನು ಕೆಲವು ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸ್ಥಾಪಿಸಲಾಗಿದೆ, ಇದು ಒಂದು ವೇಳೆ ಅಡಚಣೆಯಾದರೆ ಜನರ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಾರ್ವಜನಿಕ ಸಾರಿಗೆ ಸೇವೆ, ಆರೋಗ್ಯ ಸೇವೆಗಳನ್ನು ಒಳಗೊಂಡಿದೆ. ಪ್ರಸ್ತುತ ರಾಜ್ಯ ಸರ್ಕಾರಗಳು ಏಕಾಂಗಿಯಾಗಿ ಅಥವಾ ಇತರ ರಾಜ್ಯ ಸರ್ಕಾರಗಳೊಂದಿಗೆ ಈ ಕಾಯ್ದೆಯನ್ನು ಜಾರಿಗೊಳಿಸಬಹುದು, ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ರೈಲ್ವೇಗಳಲ್ಲಿ ಯಾವುದೇ ಅಡಚಣೆ ಉಂಟಾದರೆ ಕೇಂದ್ರ ಸರ್ಕಾರವು ESMA 1968'ನ್ನು ಅನ್ವಯಿಸಬಹುದಾಗಿದೆ. * ಎಸ್ಮಾ ನೌಕರರ ನಿಜವಾದ ಬೇಡಿಕೆಗಳನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. * ಕರ್ನಾಟಕ ಸರ್ಕಾರವು 1994 ರಲ್ಲಿ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆಯನ್ನು ಜಾರಿಗೊಳಿಸಿತು ಮತ್ತು 1994 ರ ಏಪ್ರಿಲ್. 16 ರಿಂದ ಜಾರಿಯಲ್ಲಿದೆ. ಹಾಗೂ 2015 ರ ಮೇ. 28 ರಂದು ಗೆಜೆಟ್ ಅಧಿಸೂಚನೆಯಂತೆ 2015 ರ ಜೂನ್. 09 ರಿಂದ ಜಾರಿಗೆ ಬರುವಂತೆ ಕರ್ನಾಟಕದಲ್ಲಿ ಎಸ್ಮಾವನ್ನು ಪುನಃ ಪರಿಚಯಿಸಲಾಗಿದೆ.