Job Description: * ಇತ್ತೀಚಿಗೆ ಹೈದರಾಬಾದ್‌'ನಲ್ಲಿನ ಸಲಿಂಗಕಾಮಿ ದಂಪತಿಗಳು ತಮ್ಮ ಕುಟುಂಬ ಹಾಗೂ ನಿಕಟ ಸ್ನೇಹಿತರು ಪಾಲ್ಗೊಂಡಿರುವ ಸಮಾರಂಭದಲ್ಲಿ ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಈ ಸಲಿಂಗಕಾಮಿ ದಂಪತಿಗಳು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. * ಸಲಿಂಗಕಾಮಿ ದಂಪತಿಗಳಾಗಿರುವ 31 ವರ್ಷದ ಸುಪ್ರಿಯೋ ಚಕ್ರವರ್ತಿ, ಹಾಗೂ 34 ವರ್ಷದ ಅಭಯ್ ಡ್ಯಾಂಗ್ ಇವರಿಬ್ಬರು ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಂಡರು. ಹಾಗೂ ಈ ಸಲಿಂಗಕಾಮಿ ದಂಪತಿಗಳು ತಮ್ಮ ಮದುವೆಯನ್ನ ಬೆಂಗಾಲಿ ಹಾಗೂ ಪಂಜಾಬಿ ವಿವಾಹ ವಿಧಿವಿಧಾನಗಳ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. * 31 ವರ್ಷದ ಸುಪ್ರಿಯೋ ಚಕ್ರವರ್ತಿ ಅವರು ಕೋಲ್ಕತ್ತಾ ನಗರದವರಾಗಿದ್ದಾರೆ, ಇವರು ಪ್ರಮುಖ ಹೋಟೆಲ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಹಿರಿಯ ಅಧ್ಯಾಪಕರಾಗಿದ್ದಾರೆ, ಹಾಗೂ 34 ವರ್ಷದ ಅಭಯ್ ಡ್ಯಾಂಗ್ ಅವರು ದೆಹಲಿ ಯವರಾಗಿದ್ದರೆ, ಮತ್ತು ಇವರು MNC ಉದ್ಯೋಗಿಯಾಗಿದ್ದಾರೆ. * ಈ ಸಲಿಂಗಕಾಮಿ ದಂಪತಿಗಳು ಸುಮಾರು '8' ವರ್ಷಗಳ ಸುದೀರ್ಘ ಸಂಬಂಧವನ್ನು ಹೊಂದಿದ್ದಾರೆ, ಇದೀಗ ಇವರು ಅಧಿಕೃತವಾಗಿ 'ಗಂಡ ಮತ್ತು ಹೆಂಡತಿ' ಯಾಗಿದ್ದಾರೆ. ಹೈದರಾಬಾದ್‌ನ ಸೋಫಿಯಾ ಡೇವಿಡ್ ಎಂಬ ಟ್ರಾನ್ಸ್‌ವೆಸ್ಟೈಟ್ ವ್ಯಕ್ತಿಯು ಈ ಸಲಿಂಗಕಾಮಿ ದಂಪತಿಗಳ ಮದುವೆ ಸಮಾರಂಭದ ಎಲ್ಲ ಕಾರ್ಯಗಳನ್ನು ನಿರ್ವಹಿಸಿದ್ದಾರೆ.