Job Description: * ಇತ್ತೀಚಿಗೆ ನ್ಯೂಜಿಲೆಂಡ್‌ನ ಔಷಧ ನಿಯಂತ್ರಕ ಮಂಡಳಿಯು ಕೋವಿಡ್ -19 ಚಿಕಿತ್ಸೆಗಾಗಿ 'ರೊನಾಪ್ರೀವ್'(Ronaprev) ಎಂಬ ಹೊಸ ಔಷಧ ಅನುಮೋದಿಸಿದೆ, ಈ ಔಷಧವನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸಲು ಅನುಮೋದಿಸಲಾಗಿದೆ. * ಈ ರೊನಾಪ್ರೀವ್ ಔಷಧವು ಮೊನೊಕ್ಲೋನಲ್ ಪ್ರತಿಕಾಯ ಔಷಧವಾಗಿದೆ, ಇದು ಕೋವಿಡ್ -19 ರೋಗದ ವಿರುದ್ಧ ಹೋರಾಡಲು ದೇಹದ ರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಸಹಾಯಮಾಡಲಿದೆ ಎಂದು ನ್ಯೂಜಿಲೆಂಡ್‌ನ ಆರೋಗ್ಯ ಸಚಿವಾಲಯದ ಔಷಧ ನಿಯಂತ್ರಣ ಸಂಸ್ಥೆಯ ಮೆಡ್‌ಸೇಫ್‌'ನ ಗುಂಪು ವ್ಯವಸ್ಥಾಪಕ ಕ್ರಿಸ್ ಜೇಮ್ಸ್ ಅವರು ಹೇಳಿದ್ದಾರೆ. * ಈ ಔಷಧ ಬಳಸುವದರಿಂದ ಕೋವಿಡ್ ಸೋಂಕಿತರಲ್ಲಿ ರೋಗದ ತೀವ್ರತೆ ಮಾಡುತ್ತದೆ, ಹಾಗೂ ಸೋಂಕಿತ ರೋಗಿಗಳು ಆಸ್ಪತ್ತ್ರೆಗೆ ದಾಖಲಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲದೇ ಬೇರೆಯವರಿಗೆ ವೈರಸ್ ಹರಡುವ ಅಪಾಯವನ್ನು ಸಹ ಕಡಿಮೆಗೊಳಿಸುತ್ತದೆ. ಹಾಗೂ ಈ ವೈರಸ್‌'ನಿಂದ ಗಂಭೀರ ಆರೋಗ್ಯ ಸಮಸ್ಯೆಒಳಗಾಗಿರುವ ಜನರಿಗೆ ಕೋವಿಡ್ -19 ಹರಡದಂತೆ ತಡೆಗಟ್ಟಲು ಔಷಧವನ್ನು ಬಳಸಲು ಅನುಮೋದನೆ ನೀಡಲಾಗಿದೆ. * ನ್ಯೂಜಿಲೆಂಡ್‌ನ ಈ 'ರೊನಾಪ್ರೀವ್' ಔಷಧವು ಕೋವಿಡ್-19 ರೂಪಾಂತರ ಡೆಲ್ಟಾ ತಳಿಯ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಪ್ರಯೋಗದಲ್ಲಿ ತಿಳಿದುಬಂದಿದೆ ಎಂದಿದ್ದಾರೆ. * ಈ 'ರೊನಾಪ್ರೀವ್' (Ronapreve) ಔಷಧವನ್ನು ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್, ಮತ್ತು ಕೋವಿಡ್-19 ಗೆ ಕಾರಣವಾಗುವ ವೈರಸ್ SARS-CoV-2 ನ ಸೋಂಕನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ.