Job Description: * ಇದೀಗ ಉತ್ತರಾಖಂಡ ರಾಜ್ಯವು ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ರಾಯಭಾರಿ (ಬ್ರಾಂಡ್ ಅಂಬಾಸಿಡರ್) ಆಗಿ ನೇಮಕಮಾಡಿದೆ, ಈ ಮಾಹಿತಿಯನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಿಳಿಸಿದ್ದಾರೆ. * ಉತ್ತರಾಖಂಡ ರಾಜ್ಯದ ಯುವಕರನ್ನು ಕ್ರೀಡೆ ಮತ್ತು ಸಾರ್ವಜನಿಕ ಆರೋಗ್ಯದ ಕಡೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತದ ಅತ್ಯುತ್ತಮ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಅವರನ್ನು ರಾಜ್ಯ ಸರ್ಕಾರವು 'ರಾಜ್ಯ ಬ್ರಾಂಡ್ ಅಂಬಾಸಿಡರ್'(ರಾಯಭಾರಿ)ಯಾಗಿ ನೇಮಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. * ಕ್ರಿಕೆಟಿಗ ರಿಷಬ್ ಪಂತ್ ಉತ್ತರಾಖಂಡ ಸರ್ಕಾರವು ನನ್ನನು ರಾಯಭಾರಿಯಾಗಿ ನೇಮಕಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ, ಯುವ ಜನೆತೆಯನ್ನು ಕ್ರೀಡೆ ಮತ್ತು ಸಾರ್ವಜನಿಕ ಆರೋಗ್ಯದ ಕಡೆಗೆ ಸೆಳೆಯಲು ಪ್ರಯತ್ನಪಡುತ್ತೇನೆ ಎಂದಿದ್ದಾರೆ. * ರಿಷಬ್ ರಾಜೇಂದ್ರ ಪಂತ್: ಅವರು 1997 ರ ಅಕ್ಟೋಬರ್. 04 ರಂದು ಉತ್ತರಾಖಂಡದ, ರೂರ್ಕೆಗ್(Roorkee) ಎಂಬಲ್ಲಿ ಜನಿಸಿದ್ದಾರೆ, ಇವರೊಬ್ಬ ಭಾರತೀಯ ಕ್ರಿಕೆಟಿಗ, ಇವರು ಇಂಡಿಯನ್ ಪ್ರೀಮಿಯರ್ ಲೀಗ್‌(IPL)ನಲ್ಲಿ ದೆಹಲಿ ಕ್ಯಾಪಿಟಲ್ಸ್‌ಗಾಗಿ ಮಧ್ಯಮ ಕ್ರಮಾಂಕದ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಆಗಿ ಆಟವಾಡುತ್ತಾರೆ, ಈ ಹಿಂದೆ ಇವರು 2016 ಅಂಡರ್-19 ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತದ ತಂಡದಲ್ಲಿ ತಮ್ಮ ಹೆಸರನ್ನು ಗುರುತಿಸಿಕೊಂಡರು, ಮತ್ತೇ 2017 ರಲ್ಲಿ ಭಾರತಕ್ಕಾಗಿ ಟ್ವೆಂಟಿ 20 ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದರು, ಹಾಗೂ 2018 ರಲ್ಲಿ ಏಕದಿನ ಅಂತರಾಷ್ಟ್ರೀಯ (ODI) ಚೊಚ್ಚಲ ಪ್ರವೇಶವನ್ನು ಪಡೆದರು, ಇವರು 2019 ರ ಜನೇವರಿಯಲ್ಲಿ ಪಂತ್ ಅವರಿಗೆ ICC ವರ್ಷದ ಉದಯೋನ್ಮುಖ ಆಟಗಾರ ಎಂದು ಹೆಸರಿಸಿತು. ಇದಾದ ಬಳಿಕ 2021 ರ ಫೆಬ್ರವರಿಯಲ್ಲಿ ICC ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.