Job Description: * ಪ್ರಸ್ತುತ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರು ನೌಕಾಪಡೆಯ ಕರ್ನಾಟಕ ನೌಕಾಪ್ರದೇಶದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ (FOK) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೊದಲು ಇವರ ಹುದ್ದೆಯಲ್ಲಿದ್ದ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅವರನ್ನು ಮುಂಬೈಗೆ ವರ್ಗಾವಣೆ ಮಾಡಲಾಗಿದೆ. * ರಿಯರ್ ಅಡ್ಮಿರಲ್ ಅತುಲ್ ಅವರು ಈ ಮುಂಚೆ ಮಹಾರಾಷ್ಟ್ರ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. * ಈ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್(FOK) ಹುದ್ದೆಯಲ್ಲಿನ ಅಧಿಕಾರಿಗಳು ಕರ್ನಾಟಕದ ಕಾರವಾರದ ಐ.ಎನ್.ಎಸ್(INS) ಕದಂಬ ನೌಕಾನೆಲೆಯ ಮುಖ್ಯಸ್ಥರಾಗಿರುತ್ತಾರೆ, ಅಷ್ಟೇ ಅಲ್ಲದೇ ಇವರು ರಾಜ್ಯದ ಕರಾವಳಿಯಲ್ಲಿ ನೌಕಾಪಡೆಯ ಹಡಗುಗಳು, ನೌಕೆಗಳು, ಸಬ್‌ಮರೈನ್‌ಗಳ ಕಾರ್ಯಾಚರಣೆ ಹಾಗೂ ಅವುಗಳ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ. * ರಿಯರ್ ಅಡ್ಮಿರಲ್ ಅತುಲ್ ಸಿಂಗ್ ಅವರು 1988ರ ಜ.1ರಂದು ನೌಕಾಪಡೆಗೆ ಸೇವೆ ಸಲ್ಲಿಸಲು ಸೇರಿಕೊಂಡರು, ಇವರು ಪ್ರತಿಷ್ಠಿತ ಅಮೇರಿಕ ಹಾಗೂ ಹವಾಯ್‌ನ ಭದ್ರತಾ ಅಧ್ಯಯನದ ಸಲುವಾಗಿ ಏಷ್ಯಾ ಪೆಸಿಫಿಕ್ ಕೇಂದ್ರದಲ್ಲಿ ಉನ್ನತ ಭದ್ರತಾ ಸಹಕಾರ ಕೋರ್ಸ್ ಬಗ್ಗೆ ಅಧ್ಯಯನ ಮಾಡಿದ್ದಾರೆ, ಹಾಗೂ ಇವರು ನೌಕೆಗಳಾದ ಶಾರದಾ, ರಣವಿಜಯ ಮತ್ತು ಜ್ಯೋತಿಗಳಲ್ಲಿ ದಿಕ್ಸೂಚಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರಿಗೆ ನೌಕಾಪಡೆಯಲ್ಲಿ ಅವರ ಕಾರ್ಯ ದಕ್ಷತೆಯನ್ನು ಗುರುತಿಸಿ 'ವಿಶಿಷ್ಟ ಸೇವಾ ಪದಕ' ನೀಡಿದ್ದಾರೆ.