Job Description: * ಇತ್ತೀಚಿಗೆ ಚಿಲಿ(Chile) ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೇಬ್ರಿಯಲ್ ಬೋರಿಕ್ ಅವರು ಚಿಲಿ ದೇಶದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಇವರು ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. * ಗೇಬ್ರಿಯಲ್ ಬೋರಿಕ್(35 ವರ್ಷದ) ಅವರು ಸುಮಾರು ಶೇ.56 ರಷ್ಟು ಮತಗಳನ್ನು ಪಡೆದುಕೊಳ್ಳುವ ಮೂಲಕ ಪ್ರತಿಸ್ಪರ್ಧಿಯಾಗಿರು ಜೋಸ್ ಆಂಟೋನಿಯೊ ಕಾಸ್ಟ್ ಅವರನ್ನು ಸೋಲಿಸಿ ಚಿಲಿ ದೇಶದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚಿಲಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋಸ್ ಆಂಟೋನಿಯೊ ಕಾಸ್ಟ್ ಅವರು ಶೇ. 44 ರಷ್ಟು ಮತಗಳನ್ನು ಪಡೆದು ಸೋಲ ಅನುಭವಿಸಿದ್ದಾರೆ. * ಗೇಬ್ರಿಯಲ್ ಬೋರಿಕ್ ಅವರು ಚಿಲಿಯ ಅಧ್ಯಕ್ಷರಾಗಿ 2022ರ ಮಾರ್ಚ್ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಿಂದಿನ ಚಿಲಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆದು ಹೊಸ ಇತಿಹಾಸ ಬರೆದಿದ್ದಾರೆ. * ಈ ಹಿಂದೆ 1986ರಲ್ಲಿ ಗೇಬ್ರಿಯಲ್ ಬೋರಿಕ್ ಅವರು ಚಿಲಿಯ ಪಂಟಾ ಅರೆನಾಸ್‍ನಲ್ಲಿ ಜನಿಸಿದ್ದಾರೆ, ಹಾಗೂ 2013ರಲ್ಲಿ ಗೇಬ್ರಿಯಲ್ ಬೋರಿಕ್ ಅವರು ಚಿಲಿಯ ಕಾಂಗ್ರೆಸ್ ಚುನಾವಣೆಯಲ್ಲಿ ಜಯಶಾಲಿಯಾಗಿ ಎರಡು ಬಾರಿ ಉಪನಾಯಕರಾಗಿ ಸೇವೆ ಸಲ್ಲಿಸಿದರು. * ಚಿಲಿ ದೇಶವು 6,000 ಕಿ.ಮೀ ಗಿಂತ ಹೆಚ್ಚು ಪೆಸಿಫಿಕ್ ಸಾಗರದ ಕರಾವಳಿಯನ್ನು ಹೊಂದಿರುವ ದಕ್ಷಿಣ ಅಮೆರಿಕಾದ ಪಶ್ಚಿಮ ಅಂಚಿನಲ್ಲಿನ ಕಿರಿದಾದ ದೇಶವಾಗಿದೆ. ಸ್ಯಾಂಟಿಯಾಗೊ ಚಿಲಿ ದೇಶದ ರಾಜಧಾನಿಯಾಗಿದೆ.