Job Description: * ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಡಿಶಾ ರಾಜ್ಯದ ಕಟಕ್‌ ಜಿಲ್ಲೆಯ ಗೋಪಿನಾಥಪುರದಲ್ಲಿ ಮಹಾನದಿಗೆ ನಿರ್ಮಿಸಲಾಗಿರುವ ಸೇತುವೆಯನ್ನು ಉದ್ಘಾಟಿಸಿದರು, ಇದು ಒಡಿಶಾ ರಾಜ್ಯದ ಅತೀ ಉದ್ದದ ಸೇತುವೆಯಾಗಿದೆ. * ಈ ಸೇತುವೆಯು ಸಿಂಗನಾಥ್ ಪೀಠದಿಂದ ಕಟಕ್‌ ಜಿಲ್ಲೆಯಲ್ಲಿನ ಬೈದೇಶ್ವರ್‌ಗೆ ಸಂಪರ್ಕವನ್ನು ಕಲ್ಪಿಸುವ ಸೇತುವೆಯಾಗಿದೆ, ಈ ಸೇತುವೆಯು ಸುಮಾರು 3.4 ಕಿ.ಮೀ ಉದ್ದವಾಗಿದೆ, ಈ ಸೇತುವೆಯು ಸರಿ ಸುಮಾರು '5' ಲಕ್ಷ ಪ್ರಯಾಣಿಕರಿಗೆ ಪ್ರಯಾಣ ಬೆಳೆಸಲು ಸಹಾಯವಾಗಲಿದೆ. * ಈ ಸಿಂಗನಾಥ್ ಪೀಠ ದಿಂದ ಕಟಕ್‌ ಜಿಲ್ಲೆಯಲ್ಲಿನ ಬೈದೇಶ್ವರ್‌ಗೆ ತಲುಪಲು ಈ ಮೊದಲು 45 ಕಿ.ಮೀ ಕ್ರಮಿಸಬೇಕಿತ್ತು, ಆದರೆ ಇದೀಗ ಈ ಸೇತುವೆ ಮೂಲಕ 3.4 ಕಿ.ಮೀ. ಕ್ರಮಿಸುವ ಮೂಲಕ ಆ ಸ್ಥಳಗಳಿಗೆ ತಲುಪಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಕಟಕ್‌ ಜಿಲ್ಲೆಯ ಗೋಪಿನಾಥಪುರದಲ್ಲಿ ಮಹಾನದಿಗೆ ನಿರ್ಮಿಸಲಾಗಿರುವ ಸೇತುವೆಯನ್ನು ಸೇತುವೆಯನ್ನು ಟಿ (T) ಆಕಾರದಲ್ಲಿ ಸರಿ ಸುಮಾರು 111 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ, ಈ ಹಿಂದೆ 2014ರ ಫೆಬ್ರುವರಿ 28 ರಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಅವರು ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. * ಈ ಹಿಂದೆ 2017ರಲ್ಲಿ ನವೀನ್ ಪಟ್ನಾಯಕ್ ಅವರು ಒಡಿಶಾದ ಕಥಾಜೋಡಿ ನದಿಗೆ ತ್ರಿಸುಲಿಯಾದಲ್ಲಿ ನಿರ್ಮಿಸಲಾಗಿರುವ 2.88 ಕಿ.ಮೀ. ಉದ್ದದ ಸೇತುವೆಯನ್ನು ಉದ್ಘಾಟಿಸಿದ್ದರು, ಈ ಸೇತುವೆಯು ಭುವನೇಶ್ವರದಿಂದ ಕಟಕ್‌ಗೆ ಬಾರಂಗ್‌ವರೆಗೆ ಸಂಪರ್ಕವನ್ನು ಕಲ್ಪಿಸಲಿದೆ. ಈ ಸೇತುವೆಗೆ ನೇತಾಜಿ ಸುಬಾಷ್ ಚಂದ್ರ ಬೋಸ್ ಎಂದು ಹೆಸರಿಸಲಾಗಿದೆ, ಈ ಮೊದಲು ಇದೇ ನೇತಾಜಿ ಸುಬಾಷ್ ಚಂದ್ರ ಬೋಸ್ ಸೇತುವೆಯು ಒಡಿಶಾ ರಾಜ್ಯದ ಉದ್ದದ ಸೇತುವೆಯಾಗಿತ್ತು.