Job Description: * ಈ ಹಿಂದೆ 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧದ ಭಾರತದ ವಿಜಯದ ನೆನಪಿಗಾಗಿ ಡಿಸೆಂಬರ್. 16 ರಂದು ವಿಜಯ್ ದಿವಸ್ ಆಚರಣೆ ಮಾಡಲಾಗುತ್ತದೆ. * 1971 ರ ಸಂಧರ್ಭದಲ್ಲಿ ಯುದ್ಧವು ಡಿಸೆಂಬರ್. 03 ರಂದು ಆರಂಭವಾಗಿ ಡಿಸೆಂಬರ್. 16 ರಂದು ಕೊನೆಗೊಂಡಿದೆ, ಈ ಯುದ್ಧದ ಸಂದರ್ಭದಲ್ಲಿ ಪ್ರಾಣವನ್ನು ತ್ಯಜಿಸಿರುವ ಯೋಧರಿಗೆ ನಮನ ಸಲ್ಲಿಸಲು ಪ್ರತಿವರ್ಷವು ಡಿಸೆಂಬರ್. 16 ರಂದು ಈ ವಿಜಯ್ ದಿವಸ್ ಆಚರಣೆ ಮಾಡಲಾಗುತ್ತದೆ. * ಈ ಯುದ್ಧ ನಡೆದ ಸಮಯದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ, ಹಾಗೂ ಅವರ 93 ಸಾವಿರ ಸೈನಿಕರು ಭಾರತೀಯ ಸೇನೆಗೆ ಶರಣಾದರು. * ಈಗಿನ ಬಾಂಗ್ಲಾದೇಶವು ಈ ಯುದ್ಧವಾಗುವದಕ್ಕೂ ಮುಂಚೆ ಪಾಕಿಸ್ತಾನದ ಭಾಗವಾಗಿತ್ತು, ಇದನ್ನು ಪೂರ್ವ ಪಾಕಿಸ್ತಾನ ಎನ್ನಲಾಗುತ್ತಿತ್ತು, ಆ ಸಂದರ್ಭದಲ್ಲಿ ಪಾಕಿಸ್ತಾನದ ಸೈನಿಕರು ಪೂರ್ವ ಪಾಕಿಸ್ತಾನದ ಜನರ ಮೇಲೆ ಶೋಷಣೆಯನ್ನು ನಡೆಸುತ್ತಿದ್ದರು, ಮತ್ತು ಅಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರವನ್ನು ಹಾಗೂ ಅದೆಷ್ಟೋ ಜನರನ್ನು ಕೊಂದಿದ್ದಾರೆ. * 1971 ರ ಯುದ್ಧ ಅಂತ್ಯದ ಸಂದರ್ಭದಲ್ಲಿ ಭಾರತ ದೇಶವು ಪೂರ್ವ ಪಾಕಿಸ್ತಾನ(ಈಗಿನ ಬಾಂಗ್ಲಾದೇಶ)ಕ್ಕೆ ಬೆಂಬಲವನ್ನು ನೀಡಿತ್ತು, ಮತ್ತು ಅದೇ ಸಮಯದಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಿತು. * ಪ್ರತಿ ವರ್ಷವು ಡಿಸೆಂಬರ್. 16 ರಂದು ವಿಜಯ್ ದಿವಸ್ ಅಂಗವಾಗಿ ಕೋಲ್ಕತ್ತಾದಲ್ಲಿನ ಈಸ್ಟರ್ನ್ ಕಮಾಂಡ್ ಹೆಡ್ ಕ್ವಾರ್ಟರ್ಸ್ ಪೋರ್ಟ್‌ ಮಿಲಿಯಂನಲ್ಲಿ ವಿಜಯ್ ಸ್ಮಾರಕ್‌ಕ್ಕೆ ಮಾಲಾರ್ಪಣೆ ಮಾಡಲಾಗುತ್ತದೆ. * 1971 ರಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ನೇತೃತ್ವದ ಮೇರೆಗೆ ಪಾಕಿಸ್ತಾನದ ಮೇಲೆ ಯುದ್ಧ ನಡೆಯಿತು, ಆ ಯುದ್ಧದಲ್ಲಿ ಸುಮಾರು 1400 ಕ್ಕೂ ಅಧಿಕ ಸೈನಿಕರು ಹುತಾತ್ಮರಾದರು, ಆ ಯುದ್ಧವು ಡಿಸೆಂಬರ್. 16 ರಂದು ಕೊನೆಗೊಂಡಿತು.