Job Description: * ಇತ್ತೀಚಿಗೆ ಬಿಡುಗಡೆಯಾಗಿರುವ ಯೂಗೋವ್ ಸಮೀಕ್ಷೆಯ ಪ್ರಕಾರ, 2021 ರ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಪುರುಷರಲ್ಲಿ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ಭಾರತ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ಹಾಗೂ ಸಚಿನ್ ತೆಂಡೂಲ್ಕರ್ ಅವರು ಸ್ಥಾನವನ್ನು ಪಡೆದುಕೊಂಡಿದ್ದಾರೆ. * 2021 ರ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರ ಪಟ್ಟಿಯಲ್ಲಿ, ಪ್ರಿಯಾಂಕಾ ಚೋಪ್ರಾ, ಐಶ್ವರ್ಯಾ ರೈ ಬಚ್ಚನ್, ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಪ್ರಸ್ತುತ ಯೂಗೋವ್ (YouGov) ಸಮೀಕ್ಷೆಯ ಯುರೋಪ್, ಉತ್ತರ ಅಮೇರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾ-ಪೆಸಿಫಿಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಹಾಗೂ ಇದು ತನ್ನ ಪ್ರಧಾನ ಕಛೇರಿಯನ್ನು UK ನಲ್ಲಿ ಹೊಂದಿದೆ, ಹಾಗೂ ಇದೊಂದು ಬ್ರಿಟಿಷ್ ಅಂತರಾಷ್ಟ್ರೀಯ ಇಂಟರ್ನೆಟ್ ಆಧಾರಿತ ಮಾರುಕಟ್ಟೆ ಸಂಶೋಧನೆ, ಹಾಗೂ ಡೇಟಾ ವಿಶ್ಲೇಷಣಾ ಸಂಸ್ಥೆಯಾಗಿದೆ. * ಪ್ರಸ್ತುತ ಯೂಗೋವ್ (YouGov) ಸಮೀಕ್ಷೆಯ ಈ ವರ್ಷದ ನಡೆಸಿರುವ ಅಧ್ಯಯನವು ಪ್ರಕಾರ ಪಟ್ಟಿಯನ್ನು ಕಂಪೈಲ್ ಮಾಡಲು 38 ದೇಶಗಳ, ಪ್ರಾಂತ್ಯಗಳಲ್ಲಿನ 42,000 ಕ್ಕೂ ಅಧಿಕ ಜನರನ್ನು ಸಮೀಕ್ಷೆ ಮಾಡಿದೆ. * 2021 ರಲ್ಲಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಪುರುಷರ ಪಟ್ಟಿ: 1. ಬರಾಕ್ ಒಬಾಮ, 2. ಬಿಲ್ ಗೇಟ್ಸ್, 3. ಕ್ಸಿ ಜಿನ್‌ಪಿಂಗ್, 4. ಕ್ರಿಸ್ಟಿಯಾನೋ ರೊನಾಲ್ಡೊ, 5. ಜಾಕಿ ಚಾನ್, 6. ಎಲೋನ್ ಮಸ್ಕ್, 7.ಲಿಯೋನೆಲ್ ಮೆಸ್ಸಿ, 8. ನರೇಂದ್ರ ಮೋದಿ, 9. ವ್ಲಾಡಿಮಿರ್ ಪುಟಿನ್, 10. ಜಾಕ್ ಮಾ, ಇನ್ನು ಹೀಗೆ ಹಲವುರು ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. * 2021ರಲ್ಲಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರ ಪಟ್ಟಿ: 1. ಮಿಚೆಲ್ ಒಬಾಮ, 2. ಏಂಜಲೀನಾ ಜೋಲೀ, 3. ರಾಣಿ ಎಲಿಜಬೆತ್ ಈ, 4. ಓಪ್ರಾ ವಿನ್ಫ್ರೇ, 5. ಸ್ಕಾರ್ಲೆಟ್ ಜೋಹಾನ್ಸನ್, 6. ಎಮ್ಮಾ ವ್ಯಾಟ್ಸನ್, 7. ಟೇಲರ್ ಸ್ವಿಫ್ಟ್, 8. ಏಂಜೆಲಾ ಮರ್ಕೆಲ್, 9. ಮಲಾಲಾ ಯೂಸುಫ್‌ಜಾಯ್, 10. ಪ್ರಿಯಾಂಕಾ ಚೋಪ್ರಾ, ಹೀಗೆ ಇನ್ನು ಅನೇಕರು ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.