Job Description: * ಇದೀಗ ಕೇಂದ್ರ ಸಚಿವ ಸಂಪುಟವು ಭಾರತವನ್ನ ಎಲೆಕ್ಟ್ರಾನಿಕ್ಸ್ ಕೇಂದ್ರವನ್ನಾಗಿ ಪರಿವರ್ತಿಸಲು ಸೆಮಿಕಂಡಕ್ಟರ್ ಮತ್ತು ಪ್ರದರ್ಶನ ಉತ್ಪಾದನೆಗಾಗಿ 76,000 ಕೋಟಿ ರೂ.ಗಳ ಉತ್ಪನ್ನ-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಗೆ ಅನುಮೋದನೆಯನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸುದ್ದಿ ವಾಹಿನಿಗೆ ತಿಳಿಸಿದ್ದಾರೆ. * ಈ ಯೋಜನೆ ಅಡಿಯಲ್ಲಿ ಸುಮಾರು 6 ವರ್ಷಗಳಲ್ಲಿ 76,000 ಕೋಟಿ ರೂ. ಖರ್ಚು ಮಾಡಲಾಗುತ್ತದೆ, ಹಾಗೂ 2.3 ಲಕ್ಷ ಕೋಟಿ ರೂ.ಗಳ ಪ್ರೋತ್ಸಾಹಕಗಳನ್ನು ಒದಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. * ಇದೀಗ ದೇಶದಲ್ಲಿ ಸೆಮಿಕಂಡಕ್ಟರ್ ವೇಫರ್ ಫ್ಯಾಬ್ರಿಕೇಶನ್ ಘಟಕಗಳನ್ನ ನಿರ್ಮಿಸಲು ಬಂಡವಾಳ ವೆಚ್ಚದ ಮೇಲೆ ಶೇ. 25 ರಷ್ಟು ಸಬ್ಸಿಡಿಯನ್ನು ಹೊಂದಿದೆ, ಇದೀಗ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಎಲ್ಲ ವಿಷಯದ ಮಾಹಿತಿಯನ್ನು ರೂಪಿಸಲಿದೆ. * ಇದೀಗ ದೇಶದಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಗೆ ಬೇಡಿಕೆಯನ್ನು ಇಡುತ್ತಿದ್ದಾರೆ, ಆದರೆ ಇದೀಗ ಕಾರು ತಯಾರಕರು ತೀವ್ರ ಚಿಪ್ ಕೊರತೆಯನ್ನ ಎದುರಿಸುತ್ತಿದ್ದಾರೆ, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರುವದು ತುಂಬಾ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.