Job Description: * ಇತ್ತೀಚಿಗೆ ನೇಪಾಳಿ ಕಾಂಗ್ರೆಸ್‌ನ 14 ನೇ ಸಾಮಾನ್ಯಸಭೆಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಸಲಾಗಿತ್ತು, ಈ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಧಾನಿ ಶೇರ್‌ ಬಹದ್ದೂರ್‌ ದೇವುಬಾ ಅವರು ನೇಪಾಳಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಪುನಃ ಆಯ್ಕೆಯಾಗಿದ್ದಾರೆ. ಇದು ನೇಪಾಳದ ಬಹುದೊಡ್ಡ ರಾಜಕೀಯ ಪಕ್ಷವಾಗಿದೆ.* ಪ್ರಧಾನಿ ಶೇರ್‌ ಬಹದ್ದೂರ್‌ ದೇವುಬಾ ಅವರು 2 ನೇ ಸುತ್ತಿನಲ್ಲಿ 2,733 ಮತಗಳನ್ನು ಪಡೆದುಕೊಂಡು ನೇಪಾಳಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು, ದೇವುಬಾ ಅವರು ಪ್ರತಿಸ್ಪರ್ಧಿ ಶೇಖರ್‌ ಕೊಯಿರಾಲಾ ಅವರು 1,855 ಮತಗಳನ್ನು ಪಡೆದಕೊಂಡು ಅಧ್ಯಕ್ಷರ ಆಯ್ಕೆಯಿಂದ ಹೊರನಡೆದಿದ್ದಾರೆ. * ಶೇರ್ ಬಹದ್ದೂರ್ ದೇವುಬಾ ನೇಪಾಳಿ ರಾಜಕಾರಣಿಯಾಗಿದ್ದಾರೆ, ಇವರು 2021 ರ ಜುಲೈ. 13 ರಿಂದ ನೇಪಾಳದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೊದಲು ಇವರು ನಾಲ್ಕು ಅವಧಿಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ, ಹಾಗೂ ದಡೆಲ್ಧುರಾ–1 ರ ಸಂಸದೀಯ ಕ್ಷೇತ್ರಕ್ಕೆ ಸಂಸದರಾಗಿದ್ದಾರೆ. ಹಾಗೂ 2016 ರಿಂದ ನೇಪಾಳಿ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು.* ಶೇರ್ ಬಹದ್ದೂರ್ ದೇವುಬಾ ಅವರು 1946 ರ ಜೂನ್ 13 ರಂದು, ನೇಪಾಳಿನ ಆಶಿಗ್ರಾಮ್ ಎಂಬಲ್ಲಿ ಜನಿಸಿದ್ದಾರೆ. ಇವರು ಲಂಡನ್'ನ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್, ತ್ರಿಭುವನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.