Job Description: * ಪ್ರಸ್ತುತ ಯುನೆಸ್ಕೋ ಕೋಲ್ಕತ್ತಾದ ದುರ್ಗಾ ಪೂಜೆಯನ್ನು "ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿ"(Intangible Heritage list)ಗೆ ಸೇರ್ಪಡೆ ಮಾಡಿದೆ. * ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಯನ್ನು ವಾರ್ಷಿಕವಾಗಿ ಅಂದರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಆಚರಿಸುವ ಹಬ್ಬವಾಗಿದೆ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸುಮಾರು 10 ದಿನಗಳ ಉತ್ಸವವಾಗಿದೆ, ಪಶ್ಚಿಮ ಬಂಗಾಳದ ಈ ಉತ್ಸವವು ಹಿಂದೂ ದೇವತೆ ದುರ್ಗಾಮಾತ ಹಾಗೂ ಅವಳ '4' ಮಕ್ಕಳಾಗಿರುವ ಲಕ್ಷ್ಮಿ, ಸರಸ್ವತಿ, ಗಣೇಶ, ಹಾಗೂ ಕಾರ್ತಿಕೇಯ ಅವರ ಮನೆಗೆ ಕರೆತರುವದನ್ನು ತೋರಿಸಲಿದೆ. * ಯುನೆಸ್ಕೋ ಪ್ರತಿ ವರ್ಷವು "ಅಮೂರ್ತ ಸಾಂಸ್ಕೃತಿಕ ಪರಂಪರೆ" ಪಟ್ಟಿಗೆ ವಿಶ್ವದಾದ್ಯಂತದ ಸಾಂಸ್ಕೃತಿಕ ಸಂಪ್ರದಾಯಗಳು ಹಾಗೂ ಕಲೆಗಳನ್ನು ಸೇರ್ಪಡೆ ಮಾಡುತ್ತದೆ, ಇತ್ತೀಚಿಗೆ ಪ್ಯಾರಿಸ್ ನಲ್ಲಿ ಜರುಗಿದ ಯುನೆಸ್ಕೋದ ಅಂತರ್ ಸರ್ಕಾರಿ ಸಮಿತಿ ಸಭೆಯಲ್ಲಿ ದೇಶದ ಕೋಲ್ಕತ್ತಾದಲ್ಲಿನ ದುರ್ಗಾಮಾತ ಪೂಜೆಯನ್ನ ಪಾರಂಪರಿಕ ಸ್ಥಾನಮಾನ ನೀಡುವ ನಿರ್ಧಾರವನ್ನ ಕೈಗೊಳ್ಳಲಾಗಿದೆ. * ಇದೀಗ ಕೋಲ್ಕತ್ತಾದಲ್ಲಿನ ದುರ್ಗಾ ಪೂಜೆಯನ್ನು ಧರ್ಮ, ಹಾಗೂ ಕಲೆಯ ಸಾರ್ವಜನಿಕ ಪ್ರದರ್ಶನದ ಅತ್ಯುತ್ತಮ ಉದಾಹರಣೆಯಾಗಿ ಪರಿಗಣಿಸಲಾಗಿದೆ. ಈ ಉತ್ಸವವು ನಗರ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಪ್ರಮಾಣದ ಮಂಟಪಗಳಿಂದ ಕೂಡಿರುತ್ತದೆ. ಈ ಕಾರ್ಯಕ್ರಮದಿಂದಾಗಿ ವರ್ಗ, ಧರ್ಮ, ಹಾಗೂ ಜನಾಂಗಗಳ ವಿಭಜನೆಗಳು ಕಡಿಮೆಯಾಗುತ್ತವೆ ಎಂದು ಯುನೆಸ್ಕೋ ತಿಳಿಸಿದೆ. * ಯುನೆಸ್ಕೋ ಈ ಹಿಂದೆ 2010 ರಲ್ಲಿ ಚೌ, ಕಲ್ಬೆಲಿಯಾ ಮತ್ತು ಮುಡಿಯೆಟ್ಟು ನೃತ್ಯ ಪ್ರಕಾರಗಳಿಗೆ ಮಾನ್ಯತೆ ನೀಡಿದೆ. ನಂತರ 2013 ರಲ್ಲಿ ಮಣಿಪುರದ ಸಂಕೀರ್ತನಾ ಧಾರ್ಮಿಕ ಗಾಯನಕ್ಕೆ ಮಾನ್ಯತೆ ನೀಡಿದೆ, 2014 ರಲ್ಲಿ ಪಂಜಾಬ್ʼನ ಸಾಂಪ್ರದಾಯಿಕ ಹಿತ್ತಾಳೆ ಮತ್ತು ತಾಮ್ರದ ಕರಕುಶಲತೆಯನ್ನು ತನ್ನ 'ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ' ಸೇರಿಸಿದೆ, ಮತ್ತೇ 2016 ರಲ್ಲಿ ಯೋಗವನ್ನ 'ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ' ಸೇರ್ಪಡೆ ಮಾಡಿದೆ. ಇದಷ್ಟೇ ಅಲ್ಲದೇ 2017 ರಲ್ಲಿ ಯುನೆಸ್ಕೋ ಕುಂಭಮೇಳಕ್ಕೆ ಮಾನ್ಯತೆ ನೀಡಿದೆ. * ಪ್ರಸ್ತುತ ವಿಶ್ವಸಂಸ್ಥೆಯ: ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು ವಿಶೇಷ ಸಂಸ್ಥೆಯಾಗಿದೆ, ಶಿಕ್ಷಣ, ಕಲೆ, ವಿಜ್ಞಾನ ಮತ್ತು ಸಂಸ್ಕೃತಿಯಲ್ಲಿ ಅಂತರಾಷ್ಟ್ರೀಯ ಸಹಕಾರದ ಮೂಲಕ ವಿಶ್ವ ಶಾಂತಿ ಮತ್ತು ಭದ್ರತೆಗೆ ಉತ್ತೆಜನ ನೀಡುವ ಗುರಿಯನ್ನು ಹೊಂದಿದೆ. * ಯುನೆಸ್ಕೋ ತನ್ನ ಪ್ರಧಾನ ಕಛೇರಿಯನ್ನು ಪ್ಯಾರಿಸ್, ಫ್ರಾನ್ಸ್'ನಲ್ಲಿ ಹೊಂದಿದೆ. ಡೈರೆಕ್ಟರ್-ಜನರಲ್; ಆಡ್ರೆ ಅಜೌಲೆ ಅವರು ಇದರ ಮುಖ್ಯಸ್ಥರಾಗಿದ್ದಾರೆ. * ಯುನೆಸ್ಕೋ'ವನ್ನು 1945 ರ ನವೆಂಬರ್. 16 ರಂದು ಯುನೈಟೆಡ್ ಕಿಂಗ್‌ಡಮ್ ಲಂಡನ್'ನಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಭಾರತ, ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಚೀನಾ, ಬ್ರೆಜಿಲ್, ಮೆಕ್ಸಿಕೋ, ದೇಶಗಳು ಇದರ ಸಂಸ್ಥಾಪಕ ದೇಶಗಳಾಗಿವೆ. * ವಿಶ್ವಸಂಸ್ಥೆಯು ಯುನೆಸ್ಕೋದ ಪೋಷಕ ಸಂಸ್ಥೆಯಾಗಿದೆ.