Job Description: * ಇದೀಗ ಸರ್ಕಾರವು ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುತ್ತಿದ್ದ ನಗದು ಅನುದಾನ ಮೊತ್ತವನ್ನು ಪರಿಷ್ಕರಣೆ ಮಾಡಿದೆ. * ಪರಮ ವೀರಚಕ್ರ ಪುರಸ್ಕೃತರಿಗೆ ಈ ಮೊದಲು 25 ಲಕ್ಷ ರೂ. ನೀಡಲಾಗುತ್ತಿತ್ತು, ಇದೀಗ ಅದನ್ನು 1.5 ಕೋಟಿ ರೂ. ಏರಿಕೆ ಮಾಡಿದೆ. * ಮಹಾವೀರ ಚಕ್ರ ಪುರಸ್ಕೃತರಿಗೆ ಈ ಮೊದಲು 12 ಲಕ್ಷ ರೂ. ನೀಡಲಾಗುತ್ತಿತ್ತು, ಇದೀಗ ಅದನ್ನು 1 ಕೋಟಿ ರೂ.ಗೆ ಏರಿಕೆ ಮಾಡಿದೆ. * ಅಶೋಕ ಚಕ್ರ ಪುರಸ್ಕೃತರಿಗೆ ಈ ಮೊದಲು 25 ಲಕ್ಷ ರೂ. ನೀಡಲಾಗುತ್ತಿತ್ತು, ಇದೀಗ ಅದನ್ನು 1.5 ಕೋಟಿ ರೂ.ಗೆ ಏರಿಕೆ ಮಾಡಿದೆ. * ಕೀರ್ತಿಚಕ್ರ ಪುರಸ್ಕೃತರಿಗೆ ಈ ಮೊದಲು 12 ಲಕ್ಷ ರೂ. ನೀಡಲಾಗುತ್ತಿತ್ತು, ಇದೀಗ ಅದನ್ನು 1 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. * ವೀರ ಚಕ್ರ ಪುರಸ್ಕೃತರಿಗೆ ಈ ಮೊದಲು 8 ಲಕ್ಷ ರೂ. ನೀಡಲಾಗುತ್ತಿತ್ತು, ಇದೀಗ ಅದನ್ನು 50 ಲಕ್ಷ ರೂ.ಗೆ ಏರಿಕೆ ಮಾಡಿದೆ. * ಶೌರ್ಯ ಚಕ್ರ ಪುರಸ್ಕೃತರಿಗೆ ಈ ಮೊದಲು 8 ಲಕ್ಷ ರೂ. ನೀಡಲಾಗುತ್ತಿತ್ತು, ಇದೀಗ ಅದನ್ನು 50 ಲಕ್ಷ ರೂ.ಗೆ ಏರಿಕೆ ಮಾಡಿದೆ. * ಸೇನಾ ಮೆಡಲ್ ಗೆ ಈ ಮೊದಲು 2 ಲಕ್ಷ ರೂ. ನೀಡಲಾಗುತ್ತಿತ್ತು, ಇದೀಗ ಅದನ್ನು 15 ಲಕ್ಷ ರೂ.ಗೆ ಏರಿಕೆ ಮಾಡಿದೆ. *ಈ ಎಲ್ಲ ಪ್ರಶಸ್ತಿಗಳನ್ನು ಭಾರತೀಯ ಸೈನಿಕರಿಗೆ ಅಂದರೆ ಅವರು ನೀಡಿರುವ ಅಸಾಧಾರಣ ಶೌರ್ಯ, ಘನತೆ, ಧೈರ್ಯ ಮತ್ತು ತ್ಯಾಗಕ್ಕಾಗಿ ನೀಡಲಾಗುತ್ತದೆ. ಪ್ರಾರಂಭದಲ್ಲಿ ಕೇವಲ ಮೂರು ಶೌರ್ಯ ಪ್ರಶಸ್ತಿಗಳುನ್ನು ನೀಡಲಾಗುತ್ತಿತ್ತು ಅವುಗಳು: ಪರಮ ವೀರ ಚಕ್ರ, ಮಹಾ ವೀರ ಚಕ್ರ, ಹಾಗೂ ವೀರ ಚಕ್ರವನ್ನು ಸರ್ಕಾರವು 1950 ರ ಜನೇವರಿ 26 ರಂದು ಈ ಪ್ರಶಸ್ತಿಗಳನ್ನೂ ಪರಿಚಿಯಿಸಿದೆ. * ಪರಮವೀರ ಚಕ್ರವು ಭಾರತದ ಅತ್ಯುನ್ನತ ಸೇನಾ ಅಲಂಕಾರ ಪ್ರಶಸ್ತಿಯಾಗಿದೆ, ಯುದ್ಧಕಾಲದಲ್ಲಿ ಶೌರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪರಮ ವೀರ ಚಕ್ರವನ್ನು 'ಅತ್ಯಂತ ಧೈರ್ಯಶಾಲಿ ಚಕ್ರ' ಎಂದು ಪರಿಗಣಿಸಲಾಗುತ್ತದೆ, ಹಾಗೂ 'ಶತ್ರುಗಳ ಉಪಸ್ಥಿತಿಯಲ್ಲಿ ಅತ್ಯಂತ ಧೈರ್ಯದಿಂದ ಎದ್ದುಕಾಣುವ ಶೌರ್ಯಕ್ಕಾಗಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಒಟ್ಟು: 21 * ಮೊದಲ ಪರಮವೀರ ಚಕ್ರ ಪ್ರಶಸ್ತಿಯನ್ನು 1947 ರ ನವೆಂಬರ್. 03 ರಂದು ನೀಡಲಾಗಿದೆ, ಹಾಗೂ ಕೊನೆಯದಾಗಿ 1999 ರ ಜುಲೈ 07 ರಂದು ನೀಡಲಾಗಿದೆ. * ಈ ಪ್ರಶಸ್ತಿಯನ್ನು ಸುಮಾರು 71 ವರ್ಷಗಳ ಹಿಂದೆ ಪರಿಚಯಿಸಲಾಗಿದೆ, ಅಂದರೆ 1950 ರ ಜನೇವರಿ. 26 ರಂದು. * ಪರಮವೀರ ಚಕ್ರ ಪ್ರಶಸ್ತಿಯ ನಂತರ ಹೆಚ್ಚಿನ ಗೌರವ ಹಾಗೂ ಮಹತ್ವವನ್ನು ಹೊಂದಿರುವ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿಯಾಗಿದೆ.