Job Description: * ಕೆಲ ದಿನಗಳ ಹಿಂದೆ ಡಿಸೆಂಬರ್. 08 ರಂದು ತಮಿಳುನಾಡು ರಾಜ್ಯದ ಕೂನೂರು ಪ್ರದೇಶದ ಬಳಿ ಸಂಭವಿಸಿರುವ ಭಾರತೀಯ ವಾಯುಪಡೆ ಹೆಲಿಕಾಪ್ಟರ ಪತನದಲ್ಲಿ ಅತೀ ತೀವ್ರವಾಗಿ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್ ವರುಣ ಸಿಂಗ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.* ಹೆಲಿಕಾಪ್ಟರ ಪತನದಲ್ಲಿ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್ ವರುಣ ಸಿಂಗ್ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ತೀವ್ರವಾಗಿ ಗಾಯಗೊಂಡಿರುವ ಹಿನ್ನಲೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಈ ಹಿಂದೆ ಡಿಸೆಂಬರ್. 08 ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದ ಘಟನೆಯಲ್ಲಿ CDS ಜನರಲ್ ಬಿಪಿನ್ ರಾವತ್,ಅವರ ಪತ್ನಿ ಮಧುಲಿಕಾ ರಾವತ್, ಹಾಗೂ ಇವರ ಜೊತೆ 11 ಜನರು ಮೃತಪಟ್ಟಿದ್ದುರು, ಆ ಸಂದರ್ಭದಲ್ಲಿ ವರುಣ್ ಸಿಂಗ್ ಮಾತ್ರ ಬದುಕಿದ್ದರು. ಇದೀಗ ಅವರು ಕೂಡ ನಮ್ಮನ್ನಗಲಿದ್ದಾರೆ.* ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ನಿಧನರಾಗಿದ್ದಾರೆ ಎಂದು ಭಾರತೀಯ ವಾಯುಪಡೆ ಅಧಿಕೃತವಾಗಿ ತಿಳಿಸಿದೆ, ಇದೀಗ ಭಾರತೀಯ ವಾಯುಪಡೆ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದೆ.‌* ಪ್ರಧಾನಿ ನರೇಂದ್ರ ಮೋದಿ ಜೀ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 'ಗ್ರೂಪ್ ಕ್ಯಾಪ್ಟನ್ ವರುಣ ಸಿಂಗ್ ಅವರು ನಿಧಾನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ.