Job Description: * ಪ್ರಸ್ತುತ ಭಾರತದ ವೇಟ್‌ಲಿಫ್ಟರ್ ಅಜಯ್ ಸಿಂಗ್ ಅವರು ತಾಷ್ಕೆಂಟ್ ನಲ್ಲಿ ಜರುಗುತ್ತಿರುವ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್-2021 ರ ಪುರುಷರ 81 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದಿದ್ದಾರೆ, ಹಾಗು ಇವರು 2022 ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಜರುಗುವ ಕಾಮನ್‌ವೆಲ್ತ್ ಗೇಮ್ಸ್‌ಗೆ ನೇರ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. * ಭಾರತದ ವೇಟ್‌ಲಿಫ್ಟರ್ ಅಜಯ್ ಸಿಂಗ್ ಅವರು ಈ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 322 ಕೆಜಿ ತೂಕ ಎತ್ತುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ, ಹಾಗು ಸುಮಾರು 147 ಕೆಜಿ ತೂಕ ಎತ್ತುವನ್ನು ಎತ್ತಿ ಸ್ನಾಚ್ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. * ಈ ಮೊದಲು ಜೆರೆಮಿ ಲಾಲ್‌ರಿನ್ನುಂಗ ಮತ್ತು ಅಚಿಂತಾ ಶೆಯುಲಿ ಅವರು 2022 ರಲ್ಲಿ ಜರುಗುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ, ಅವರ ನಂತರ ಅರ್ಹತೆ ಪಡೆದ ಭಾರತದ 3 ನೇ ವೇಟ್‌ಲಿಫ್ಟರ್ ಇವರಾಗಿದ್ದಾರೆ. * ವೇಟ್‌ಲಿಫ್ಟರ್ ಅಜಯ್ ಸಿಂಗ್ ಅಷ್ಟೇ ಅಲ್ಲದೇ ಮಹಿಳೆಯರ 59 ಕೆಜಿ ವಿಭಾಗದಲ್ಲಿ ಹಝರಿಕಾ ಒಟ್ಟು 322 ಕೆಜಿ ತೂಕ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.