Job Description: * ಪ್ರಸ್ತುತ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಅವರು ಇತ್ತೀಚಿಗಷ್ಟೇ ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ, ಇದಾದ ನಂತರ ಆಯಶಸ್ ಸರಣಿಯ ಬ್ರಿಸ್ಬೇನ್ ಟೆಸ್ಟ್ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ವೈಖರಿಯನ್ನು ತೋರಿದ್ದಾರೆ, ಇವರ ಈ ಸಾಧನೆಗಾಗಿ ನವೆಂಬರ್ ತಿಂಗಳಿನ 'ಐಸಿಸಿ ತಿಂಗಳ ಕ್ರಿಕೆಟಿಗ' ಎಂಬ ಪ್ರಶಸ್ತಿ ಲಭಿಸಿದೆ. * 'ಐಸಿಸಿ ತಿಂಗಳ ಕ್ರಿಕೆಟಿಗ' ಎಂಬ ಪ್ರಶಸ್ತಿಯನ್ನು ಪಡೆಯುವ ರೇಸ್ನಲ್ಲಿ ಡೇವಿಡ್ ವಾರ್ನರ್, ಮತ್ತು ಪಾಕಿಸ್ಥಾನದ ಅಬಿದ್ ಅಲಿ, ಹಾಗೂ ನ್ಯೂಜಿಲ್ಯಾಂಡಿನ ವೇಗಿ ಟಿಮ್ ಸೌಥಿ ಅವರಿದ್ದರು ಆ ಪ್ರಶಸ್ತಿ ಅಂತಿಮವಾಗಿ ಡೇವಿಡ್ ವಾರ್ನರ್ ಅವರಿಗೆ ಲಭಿಸಿದೆ. * ವೆಸ್ಟ್ ಇಂಡೀಸ್ನ ಹ್ಯಾಲಿ ಮ್ಯಾಥ್ಯೂಸ್ ಅವರು ಈ ಹಿಂದಿನ ಅಂದರೆ ನವೆಂಬರ್ ತಿಂಗಳ ವನಿತಾ ವಿಭಾಗದ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು, ಈ ಮೊದಲು ಮ್ಯಾಥ್ಯೂಸ್ ಅವರು ಜುಲೈ ತಿಂಗಳಿನಲ್ಲಿ ಮೊದಲನೇ ಸಲ 'ತಿಂಗಳ ಆಟಗಾರ್ತಿ ಪ್ರಶಸ್ತಿ'ಯನ್ನು ಪಡೆದುಕೊಂಡಿದ್ದರು, ಇದೀಗ ಇವರಿಗೆ ಈ ಪ್ರಶಸ್ತಿ 2 ನೇ ಬಾರಿ ಲಭಿಸಿದೆ. * ICC ಪ್ಲೇಯರ್ ಆಫ್ ದಿ ಮಂತ್(ತಿಂಗಳ ಆಟಗಾರ್ತಿ ಪ್ರಶಸ್ತಿ)ಯನ್ನು ಒಂದು ತಿಂಗಳಿನಲ್ಲಿ ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನು ಗುರುತಿಸಲು ಪುರುಷ ಮತ್ತು ಮಹಿಳಾ ಕ್ರಿಕೆಟಿಗರನ್ನು ಗುರುತಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಜನವರಿ 2021 ರಿಂದ ನೀಡುತ್ತಿರುವ ಪ್ರಶಸ್ತಿ ಇದಾಗಿದೆ.