Job Description: * ಇತ್ತೀಚಿಗೆ ಪಾಕಿಸ್ತಾನ ಕ್ರಿಕೆಟ್ ತಂಡವು ಆಟದಲ್ಲಿ ಉತ್ತಮ ಪ್ರದರ್ಶನವನ್ನು ತೋರಿಸುತ್ತಿದೆ, ಇದೀಗ ಮತ್ತೊಂದು ದಾಖಲೆ ನಿರ್ಮಿಸಿದೆ, ಅದುವೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ ತಂಡವು ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಜಯ ಸಾಧಿಸಿದೆ. ಇದೀಗ ಪಾಕ್ ತಂಡವು ಈ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟಿ20 ಪಂದ್ಯ ಗೆಲ್ಲುವ ಮೂಲಕ ಒಂದು ವರ್ಷದಲ್ಲಿ ಅತೀ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ತಂಡವಾಗಿ ಹೊರಹೊಮ್ಮಿದೆ. * ಪ್ರಸ್ತುತ ಪಾಕಿಸ್ತಾನ ತಂಡವು 2021 ರಲ್ಲಿ ಅಂದರೆ ಇಲ್ಲಿಯವರೆಗೆ 18-ಟಿ-20 ಪಂದ್ಯಗಳನ್ನು ಗೆದ್ದುಕೊಂಡಿದೆ. ಇದೀಗ ಪಾಕಿಸ್ತಾನ ಒಂದೇ ವರ್ಷದಲ್ಲಿ 18-ಟಿ20 ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿದೆ, ಈ ಮೊದಲು 2018 ರಲ್ಲಿ ಪಾಕಿಸ್ತಾನ ತಂಡವು 17-ಟಿ20 ಪಂದ್ಯಗಳಲ್ಲಿ ಜಯ ಸಾಧಿಸಿತ್ತು.