Job Description: * ಇದೀಗ ಸುಪ್ರೀಂ ಕೋರ್ಟ್ ಭದ್ರತೆಯ ಹಿನ್ನಲೆಯಿಂದಾಗಿ ಚಾರ್ಧಾಮ್ ಯೋಜನೆಯ ರಸ್ತೆಗಳ ಅಗಲೀಕರಣಕ್ಕೆ ಅನುಮತಿಯನ್ನು ನೀಡಿದೆ, ಅಷ್ಟೇ ಅಲ್ಲದೇ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಮಾಜಿ ನ್ಯಾಯಮೂರ್ತಿ ಎ ಕೆ ಸಿಕ್ರಿ ನೇತೃತ್ವದಲ್ಲಿ ಈ ಯೋಜನೆಯ ಮೇಲ್ವಿಚಾರಣೆಗಾಗಿ ಸಮಿತಿಯನ್ನು ರಚಿಸಿದೆ. * ಈ ಚಾರ್ ಧಾಮ್ ರಸ್ತೆ ಅಗಲೀಕರಣ ಯೋಜನೆಯ ಮೇಲ್ವಿಚಾರಣಾ ಸಮಿತಿಗೆ ರಕ್ಷಣಾ ಸಚಿವಾಲಯ, ಸಾರಿಗೆ ಸಚಿವಾಲಯ, ಉತ್ತರಾಖಂಡ ಸರ್ಕಾರ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್'ಗಳ ಮೂಲಕ ಎಲ್ಲಾ ರೀತಿಯ ನೆರವನ್ನು ಪಡೆದುಕೊಳ್ಳಲಿದೆ. * ಈ ಚಾರ್ಧಾಮ್ ಯೋಜನೆಯು ಉತ್ತರಾಖಂಡ ರಾಜ್ಯದ '4' ಪವಿತ್ರ ಪಟ್ಟಣ ಸಂಪರ್ಕವನ್ನು ಕಲ್ಪಿಸಲಿದೆ, ಆ ಪಟ್ಟಣಗಳು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಹಾಗೂ ಬದರಿನಾಥ್ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ, ಇದು ಸುಮಾರು 900-ಕಿಮೀ ಉದ್ದದ ಯೋಜನೆಯಾಗಿದೆ, ಹಾಗೂ ಇದಕ್ಕೆ 12 ಸಾವಿರ ಕೋಟಿ ವೆಚ್ಚ ತಗುಲಲಿದೆ ಎಂದಿದ್ದಾರೆ. * ಇದೀಗ ಗಡಿಗಳನ್ನು ರಕ್ಷಿಸಲು, ಹಾಗೂ ಸಶಸ್ತ್ರ ಪಡೆಗಳಿಗೆ ಮೂಲಸೌಕರ್ಯವನ್ನು ಪೂರೈಸಲು ಈ ಚಾರ್ ಧಾಮ್ ರಸ್ತೆ ಅಗಲೀಕರಣ ಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. * ಚಾರ್ ಧಾಮ್: ಇದೊಂದು ಭಾರತದ ನಾಲ್ಕು(4) ಯಾತ್ರಾ ಸ್ಥಳಗಳ ಗುಂಪಾಗಿದೆ. ಈ ಸ್ಥಳಗಳಿಗೆ ಭೇಟಿ ನೀಡುವುದರಿಂದ ಮೋಕ್ಷ ಪಡೆಯಲು ಸಹಾಯವಾಗುತ್ತದೆ ಎಂದು ನಮ್ಮ ಹಿರಿಯರು ನಂಬಿದ್ದಾರೆ. * ಚಾರ್ ಧಾಮ್ ಅಂದರೆ ನಾಲ್ಕು ಧಾಮ, ಅವುಗಳು ಬದರಿನಾಥ್, ದ್ವಾರಕಾ, ಪುರಿ ಮತ್ತು ರಾಮೇಶ್ವರಂ ಎಂಬ ಪವಿತ್ರ ಯಾತ್ರಾ ಸ್ಥಳಗಳಾಗಿವೆ, ಈ ನಾಲ್ಕು ಸ್ಥಳಗಳಿಗೆ ಪ್ರತಿಯೊಬ್ಬ ಹಿಂದೂ ತನ್ನ ಜೀವಿತಾವಧಿಯಲ್ಲಿ ಭೇಟಿ ನೀಡಬೇಕು ಅದರಿಂದ ಅವರಿಗೆ ಮೋಕ್ಷ ಸಿಗಲಿದೆ ಎಂದು ನಂಬಲಾಗಿದೆ. ಹಾಗೂ ಆದಿ ಶಂಕರಾಚಾರ್ಯರು ವ್ಯಾಖ್ಯಾನಿಸಿದ ಪ್ರಕಾರ ಚಾರ್ ಧಾಮ್ ಇವು ನಾಲ್ಕು ಹಿಂದೂ ಯಾತ್ರಾ ಸ್ಥಳಗಳಾಗಿವೆ ಅವುಗಳು, ಉತ್ತರಾಖಂಡದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಹಾಗೂ ಬದರಿನಾಥ ಈ ಯಾತ್ರಾ ಸ್ಥಳಗಳನ್ನು ಚಾರ್ ಧಾಮ್ ಎಂದು ಕರೆಯುತ್ತಾರೆ.