Job Description: * ಪ್ರಸ್ತುತ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(SII) ಮುಂಬರುವ '6' ತಿಂಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಸಿದ್ಧವಾಗಿದೆ ಎಂಬ ಮಾಹಿತಿಯನ್ನು ಸಿಇಒ ಅದಾರ್ ಪೂನಾವಾಲಾ ಉದ್ಯಮ ಸಮ್ಮೇಳನದಲ್ಲಿ ಪಾಲ್ಗೊಂಡ ಸಂಧರ್ಭದಲ್ಲಿ ತಿಳಿಸಿದ್ದಾರೆ. * ಮಕ್ಕಳಿಗೆ ನೀಡಲಾಗುವ ಕೋವೊವ್ಯಾಕ್ಸ್ ಲಸಿಕೆಯು ಪ್ರಯೋಗ ಹಂತದಲ್ಲಿದೆ, ಹಾಗೂ ಇದು '3' ವರ್ಷ ಮೇಲ್ಪಟ್ಟ ಮಕ್ಕಳಿಗೆ ರಕ್ಷಣೆಯನ್ನು ನೀಡಲಿದೆ ಎಂದಿದ್ದಾರೆ. * ಇದೀಗ ಸೆರಂ ಇನ್ಸ್ಟಿಟ್ಯೂಟ್ ಕೋವಿಶೀಲ್ಡ್ ಬೂಸ್ಟರ್ ಡೋಸ್ಗಾಗಿ ಡಿಸಿಜಿಐ(DCGI) ಅನುಮೋದನೆಯನ್ನು ಕೇಳಿದೆ, ಆದರೆ ಇದೀಗ ಕೋವಿಶೀಲ್ಡ್ ಮತ್ತು ಇತರ ಕೋವಿಡ್ ಲಸಿಕೆಗಳನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲು ಅನುಮತಿಯನ್ನು ನೀಡಿದೆ. * ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII): ಇದೊಂದು ಭಾರತೀಯ ಜೈವಿಕ ತಂತ್ರಜ್ಞಾನ ಹಾಗೂ ಜೈವಿಕ ಔಷಧೀಯ ಕಂಪನಿಯಾಗಿದೆ. ಈ ಕಂಪನಿಯು ಭಾರತದ ಪುಣೆ ನಗರದಲ್ಲಿದೆ, ಹಾಗೂ ಇದು ವಿಶ್ವದ ಅತಿ ದೊಡ್ಡ ಲಸಿಕೆಗಳ ಉತ್ಪಾದಕ ಕಂಪನಿಯಾಗಿದೆ. * ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ 1966 ರಲ್ಲಿ ಸೈರಸ್ ಪೂನವಾಲಾ ಅವರು ಪುಣೆಯಲ್ಲಿ ಸ್ಥಾಪಿಸಿದ್ದಾರೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವು ದೊಡ್ಡ ಪ್ರಮಾಣದಲ್ಲಿ ತಯಾರಿಸಿದ ಮೊದಲ ಉತ್ಪನ್ನಗಳಲ್ಲಿ ಟೆಟನಸ್ ಆಂಟಿಟಾಕ್ಸಿನ್, ಹಾವಿನ ಆಂಟಿವೆನಮ್, DPT ಲಸಿಕೆ ಹಾಗೂ MMR ಲಸಿಕೆಗಳು, ಅಷ್ಟೇ ಅಲ್ಲದೇ 2014 ರ ಹೊತ್ತಿಗೆ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO), UNICEF ಮತ್ತು ಪ್ಯಾನ್ ಅಮೇರಿಕನ್ ಹೆಲ್ತ್ ಆರ್ಗನೈಸೇಶನ್ (PAHO) ನಡೆಸುತ್ತಿರುವ ಅಂತರರಾಷ್ಟ್ರೀಯ ಲಸಿಕೆ ಕಾರ್ಯಕ್ರಮಗಳಲ್ಲಿ ಬಳಕೆಮಾಡಲಾಯಿತು. ಪ್ರಸ್ತುತ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಪೂನಾವಲ್ಲ ಗ್ರೂಪ್ ಮುನ್ನಡೆಸುತ್ತಿದೆ, ಹಾಗೂ ಈ ಸಂಸ್ಥೆಯನ್ನು ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದನೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. * ಮತ್ತೇ 2009 ರಲ್ಲಿ ಕಂಪನಿಯು ಇಂಟ್ರಾನಾಸಲ್ ಹಂದಿ ಜ್ವರ ಲಸಿಕೆಯನ್ನು ಅಭಿವೃದ್ಧಿಪಡಿಸಲು ಆರಂಭಿಸಿತು. 2012 ರಲ್ಲಿ, ಇದಾದ ಬಳಿಕ ಮತ್ತೇ 2016 ರಲ್ಲಿ, ಯುನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ವೈದ್ಯಕೀಯ ಶಾಲೆಯ US-ಮೂಲದ ಮಾಸ್ ಬಯೋಲಾಜಿಕ್ಸ್ನ ಸಹಾಯದೊಂದಿಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತಷ್ಟು ವೇಗವಾಗಿ ಕಾರ್ಯನಿರ್ವಹಿಸುವ ಆಂಟಿ-ರೇಬೀಸ್ ಏಜೆಂಟ್'ನ್ನು ಕಂಡುಹಿಡಿಯಿತು, ಅದುವೇ ರೇಬೀಸ್ ಹ್ಯೂಮನ್ ಮೊನೊಕ್ಲೋನಲ್ ಆಂಟಿಬಾಡಿ (RMAb), ಹಾಗೂ ಇದನ್ನು ರಾಬಿಶೀಲ್ಡ್ ಎಂದೂ ಕರೆಯುತ್ತಾರೆ.