Job Description: * ಕರ್ನಾಟಕದ ಮೋಟರ್ಸ್ಪೋರ್ಟ್ ಪಟುವಾಗಿರುವ ಐಶ್ವರ್ಯ ಪಿಸ್ಸೆ ಅವರು ರಾಷ್ಟ್ರೀಯ ಮೋಟರ್ಸ್ಪೋರ್ಟ್ಸ್ ರ್ಯಾಲಿ ಚಾಂಪಿಯನ್ಷಿಪ್ನಲ್ಲಿ ಸತತ 5ನೇ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಈ ಚಾಂಪಿಯನ್ಷಿಪ್'ನ್ನು ತಮಿಳುನಾಡಿನ ಕೊಯಮತ್ತೂರು ಆಟೊ ಸ್ಪೋರ್ಟ್ಸ್ ಕ್ಲಬ್ ಮತ್ತು ಗಾಡ್ ಸ್ಪೀಡ್ ರೇಸಿಂಗ್ ಸಂಸ್ಥೆಯು ದ್ವಿಚಕ್ರವಾಹನ ಚಾಲಕರಿಗಾಗಿ ಈ ಸ್ಪರ್ಧೆ ತಮಿಳುನಾಡಿನ ಕೇತನೂರಿನಲ್ಲಿ ನಡೆಸಿದೆ. * ಬೆಂಗಳೂರಿನ ಐಶ್ವರ್ಯ ಅವರು ಟಿವಿಎಸ್(TVS) ತಂಡದ ಚಾಲಕಿಯಾಗಿದ್ದಾರೆ, ನಡೆದ ರ್ಯಾಲಿಯ '4' ಹಂತಗಳಲ್ಲಿ ಭರ್ಜರಿ ಜಯ ಗಳಿಸಿದ್ದಾರೆ, ಈ ರ್ಯಾಲಿಯಲ್ಲಿ ಇವರಿಗೆ ಲಭಿಸಿರುವ ಪ್ರಶಸ್ತಿ 8ನೇ ಪ್ರಶಸ್ತಿಯಾಗಿದೆ.