Job Description: * ಪ್ರಸ್ತುತ ಇದೇ ಡಿಸೆಂಬರ್. 14ರಂದು ಅಸ್ಸಾಂನ ದಿಬ್ರುಘರ್ ಜಿಲ್ಲೆಯಲ್ಲಿ ವಿಶೇಷ ಚಹಾ'ನ ಪ್ರತಿ ಕೆ.ಜಿ.ಗೆ 99,999 ರೂ.ಗಳಿಗೆ ಹರಾಜು ಮಾಡಲಾಗಿದೆ, ಇದೀಗ ಇದು ದೇಶದಲ್ಲಿನ ಯಾವುದೇ ಚಹಾ ಹರಾಜಿನಲ್ಲಿ ಪಡೆಯದ ಅತ್ಯಧಿಕ ಬೆಲೆಯನ್ನು ಪಡೆದಿದೆ ಎಂಬ ಮಾಹಿತಿಯನ್ನ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. * ಅಸ್ಸಾಂ'ನ ಗುವಾಹಟಿ ಸಗಟು ವ್ಯಾಪಾರಿ ಸೌರಭ್ ಟೀ ಟ್ರೇಡರ್ಸ್ (Saurabh Tea Traders) ರವರು ಈ ಚಹಾಕ್ಕಾಗಿ ಬಿಡ್ ಮಾಡಿ, ಆ ಬಿಡ್'ನ್ನು ಗೆದ್ದುಕೊಂಡಿದ್ದಾರೆ. * ಇದೀಗ ಗುವಾಹಟಿ ಚಹಾ ಹರಾಜು ಕೇಂದ್ರ (GTAC) ಕಾರ್ಯದರ್ಶಿಯಾಗಿರುವ ಪ್ರಿಯನುಜ್ ದತ್ತಾ ಅವರು ಮನೋಹರಿ ಟೀ ಗಾರ್ಡನ್'ನ 'ಮನೋಹರಿ ಗೋಲ್ಡ್'( Manohari Gold Tea) ಚಹಾವನ್ನು ಸೌರಭ್ ಚಹಾ ವ್ಯಾಪಾರಿಗಳಿಗೆ ಸುಮಾರು 99,999ರೂ.ಗಳಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ, ಹಾಗೂ 'ದೇಶದಲ್ಲಿ ಚಹಾ ಮಾರಾಟ ಹಾಗೂ ಖರೀದಿಬೆಲೆಯು ಇಲ್ಲಿಯವರೆಗಿನ ಚಹಾ ಮಾರಾಟ ಬೆಲೆಗಿಂತ ಗರಿಷ್ಠ ಬೆಳೆಗೆ ಹರಾಜು ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಗ್ರಾಹಕರ ಹೆಚ್ಚಿನ ಬೇಡಿಕೆಯ ಆಧಾರದ ಮೇಲೆ ಈ ರೀತಿಯ ಪ್ರೀಮಿಯಂ ಗುಣಮಟ್ಟದ ವಿಶೇಷ ಚಹಾವನ್ನ ತಯಾರಿಸುತ್ತೇವೆ ಎಂದು ಮನೋಹರಿ ಟೀ ಎಸ್ಟೇಟ್ʼನ ಮಾಲೀಕರಾದ ರಾಜನ್ ಲೋಹಿಯಾ ಅವರು ತಿಳಿಸಿದ್ದಾರೆ. * ಈ ಹಿಂದೆ 2019ರ ಜುಲೈ'ನಲ್ಲಿ ನಡೆದ GTAC ಹರಾಜಿನಲ್ಲಿ ಮನೋಹರಿ ಗೋಲ್ಡ್ ಟೀ ಪ್ರತಿ ಕೆ.ಜಿ.ಗೆ 50,000 ರೂ.ಗಳಿಗೆ ಮಾರಾಟವಾಗಿತ್ತು, ಈ ಬೆಲೆಯು ಆ ಸಂಧರ್ಭದಲ್ಲಿ ಅತೀ ಹೆಚ್ಚಿನ ಹರಾಜು ಬೆಲೆಯಾಗಿತ್ತು. * ಇದಲ್ಲದೇ ಅರುಣಾಚಲ ಪ್ರದೇಶದ ಡೋನಿ ಪೋಲೊ ಟೀ ಎಸ್ಟೇಟ್ ನಿರ್ಮಾಣ ಮಾಡಿರುವ ಗೋಲ್ಡನ್ ನೂಡಲ್ಸ್ ಟೀ ಹಾಗೂ ಅಸ್ಸಾಂನ ಡಿಕೋನ್ ಟೀ ಎಸ್ಟೇಟ್'ನ "ಗೋಲ್ಡನ್ ಬಟರ್ ಫ್ಲೈ ಟೀ" GTAC ಹರಾಜಿನಲ್ಲಿ ಪ್ರತಿ ಕೆ.ಜಿ.ಗೆ 75,000 ರೂ.ಗಳಿಗೆ ಮಾರಾಟವಾದ ಬಳಿಕ ಕೆಲ ದಿನಗಳಲ್ಲೇ ಮನೋಹರಿ ಗೋಲ್ಡ್'( Manohari Gold Tea) ಚಹಾ ಪ್ರತಿ ಕೆ.ಜಿ.ಗೆ 99,999 ರೂ.ಗಳ ದಾಖಲೆ ಬೆಲೆಗೆ ಮಾರಾಟವಾಗಿದೆ.