Job Description: * ಕರ್ನಾಟಕದ ವಿಧಾನ ಪರಿಷತ್ ಚುನಾವಣೆ ಫಲಿತಾಂಶವು ಡಿಸೆಂಬರ್. 14 ರಂದು ಪ್ರಕಟವಾಗಿದೆ. * ಈ ವಿಧಾನ ಪರಿಷತ್ ಚುನಾವಣೆಗೆ ಸ್ಥಳೀಯ ಸಂಸ್ಥೆಗಳಿಂದ 25 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಇದೇ ಡಿಸೆಂಬರ್. 10ರಂದು ಚುನಾವಣೆಯನ್ನು ನಡೆಸಲಾಗಿತ್ತು, ಇದೀಗ ಆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. * ವಿಧಾನ ಪರಿಷತ್ ಚುನಾವಣೆ ಫಲಿತಾಂಶ: - ಕಾಂಗ್ರೆಸ್ ಪಕ್ಷವು ಬೀದರ್, ವಿಜಯಪುರ (ದ್ವಿ-ಸದಸ್ಯ ಕ್ಷೇತ್ರ), ದಕ್ಷಿಣ ಕನ್ನಡ (ದ್ವಿ-ಸದಸ್ಯ ಕ್ಷೇತ್ರ), ಕೋಲಾರ, ಬೆಂಗಳೂರು ಗ್ರಾಮಾಂತರ, ಧಾರವಾಡ (ದ್ವಿ-ಸದಸ್ಯ ಕ್ಷೇತ್ರ), ರಾಯಚೂರು, ಬೆಳಗಾವಿ, ಮಂಡ್ಯ, ಮೈಸೂರು, ತುಮಕೂರು ಸೇರಿ 11 ಸ್ಥಾನಗಳಲ್ಲಿ ಜಯಗಳಿಸಿದೆ. - ಜೆಡಿಎಸ್(JDS) ಪಕ್ಷವು 6 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನೂ ಕಣಕ್ಕಿಳಿಸಿತ್ತು, ಅದರಲ್ಲಿ ಹಾಸನ, ಮೈಸೂರು-ಚಾಮರಾಜನಗರ ಈ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. - ಬಿಜೆಪಿ ಪಕ್ಷವು : ಕೊಡಗು, ಬೆಂಗಳೂರು, ಚಿತ್ರದುರ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ, ಕಲಬುರಗಿ, ದಕ್ಷಿಣ ಕನ್ನಡ (ದಿ-ಸದಸ್ಯ ಕ್ಷೇತ್ರ), ಧಾರವಾಡ (ದ್ವಿ-ಸದಸ್ಯ ಕ್ಷೇತ್ರ), ವಿಜಯಪುರ (ದ್ವಿ-ಸದಸ್ಯ ಕ್ಷೇತ್ರ)ದಲ್ಲಿ ಗೆಲುವು ಸಾಧಿಸಿದೆ. * ಕರ್ನಾಟಕ ವಿಧಾನ ಪರಿಷತ್ತು: ಕರ್ನಾಟಕ ವಿಧಾನ ಪರಿಷತ್ತು ದಕ್ಷಿಣ ಪಶ್ಚಿಮ ಭಾರತದ ಕರ್ನಾಟಕ ರಾಜ್ಯದ ಉಭಯ ಸದನಗಳ ಶಾಸಕಾಂಗದ ಮೇಲ್ಮನೆಯಾಗಿದೆ. * ಕರ್ನಾಟಕ ರಾಜ್ಯವು ಭಾರತದ '6' ರಾಜ್ಯಗಳಲ್ಲಿ ಒಂದಾಗಿದೆ ( ಈ ಹಿಂದೆ '7'), ಅಲ್ಲಿ ರಾಜ್ಯ ಶಾಸಕಾಂಗವು ಎರಡು ಸದನಗಳನ್ನು ಒಳಗೊಂಡಿದೆ, ಅವುಗಳು ವಿಧಾನ ಸಭೆ, ಮತ್ತು ವಿಧಾನ ಪರಿಷತ್. ಕರ್ನಾಟಕ ವಿಧಾನ ಪರಿಷತ್ತು 75 ಸದಸ್ಯರನ್ನು ಹೊಂದಿರುವ ಶಾಶ್ವತ ಸಂಸ್ಥೆಯಾಗಿದೆ. * ಕರ್ನಾಟಕ ಲೆಜಿಸ್ಲೇಟಿವ್ ಕೌನ್ಸಿಲ್(Karnataka Legislative Council) ಶಾಶ್ವತ ಸಂಸ್ಥೆಯಾಗಿದೆ, ಇದರ 3ನೇ ಒಂದು ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ, ಈ ಸದಸ್ಯರ ಅವಧಿ 6 ವರ್ಷಗಳವರೆಗೆ ಇರಲಿದೆ. * ಪ್ರಸ್ತುತ, ವಿಧಾನ ಪರಿಷತ್ತಿನ 75 ಸದಸ್ಯರಲ್ಲಿ, 25 ಮಂದಿ ಕರ್ನಾಟಕ ವಿಧಾನಸಭೆ ಸದಸ್ಯರು, 25 ಸ್ಥಳೀಯ ಅಧಿಕಾರಿಗಳು, 7 ಪದವೀಧರರು, 7 ಶಿಕ್ಷಕರು ಮತ್ತು 11 ಸದಸ್ಯರನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡುತ್ತಾರೆ.