Job Description: * ಪ್ರಸ್ತುತ ಮಿಗ್ ಯುದ್ಧ ವಿಮಾನ, ಯುದ್ಧ ಟ್ಯಾಂಕರ್'ಗಳನ್ನು ಹೊಂದಿರುವ ಕೊಡಗಿನ ಜನರಲ್ ತಿಮ್ಮಯ್ಯ ಮ್ಯೂಸಿಯಂ (General Thimayya Museum) ರಾಷ್ಟ್ರದ ಗಮನ ತನ್ನೆಡೆಗೆ ಸೆಳೆಯುತ್ತಿದೆ. * ಕರ್ನಾಟಕದ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಇದೀಗ ಭಾರತೀಯ ಯುದ್ಧ ನೌಕೆ ಶಿವಾಲಿಕ್ ಮಾದರಿ ನೌಕೆ ಸೇರಿಕೊಂಡಿದೆ, ಭಾರತೀಯ ನೌಕಪಡೆಯ ಪೂರ್ವ ವಿಭಾಗದ ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್ ಗುಪ್ತ ಅವರು ಈ INS 'ಶಿವಾಲಿಕ್' (INA Shivalik) ಮಾದರಿಯ ಯುದ್ಧ ನೌಕೆಯನ್ನು ಲೋಕಾರ್ಪಣೆಗೊಳಿಸಿದರು. * ಮುಂದಿನ ದಿನಗಳಲ್ಲಿ ಭಾರತೀಯ ನೌಕಾಪಡೆಯಿಂದ 41 ಯುದ್ದ ಹಡಗು ನಿರ್ಮಿಸಲಾಗುತ್ತದೆ, ಅದರಲ್ಲಿ ಕನಿಷ್ಠ 31 ಯುದ್ಧ ಹಡಗುಗಳನ್ನು ಭಾರತದಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ, ಈ ಯುದ್ಧ ಹಡಗುಗಳು ಮುಂಬಯಿ, ಕೊಲ್ಕತ್ತ, ಗೋವಾ, ವಿಶಾಖಪಟ್ಟಣ ಇಲ್ಲಿ ನಿರ್ಮಾಣವಾಗಲಿದೆ ಎಂದು ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್ ಗುಪ್ತ ಅವರು ತಿಳಿಸಿದ್ದಾರೆ. * ತಿಮ್ಮಯ್ಯ ಮ್ಯೂಸಿಯಂಗೆ INS ಶಿವಾಲಿಕ್' (INA Shivalik) ಮಾದರಿಯ ಯುದ್ಧ ನೌಕೆ ಅಷ್ಟೇ ಅಲ್ಲದೇ ರಿಯರ್ ಅಡ್ಮಿರಲ್ ಉತ್ತಯ್ಯ ಅವರು ನೌಕಾಪಡೆಯ ಸಬ್ ಮೆರಿನ್ ಉದ್ಘಾಟಣೆಯನ್ನು ನೆರವೇರಿಸಿದರು, ಈ ಸಬ್ ಮೆರಿನ್ ಜಲಂತರಗಾಮಿ ಯುದ್ಧ ನೌಕೆಯ ಮಾದರಿಯನ್ನು ಈ ಮ್ಯೂಸಿಯಂಗೆ ಸೇರಿಸಿದರು. * INS ಶಿವಾಲಿಕ್: ಇದೊಂದು ಭಾರತೀಯ ನೌಕಾಪಡೆಗಾಗಿ ನಿರ್ಮಿಸಲಾದ ಸ್ಟೆಲ್ತ್ ಮಲ್ಟಿ-ರೋಲ್ ಫ್ರಿಗೇಟ್ಗಳ ತನ್ನ ವರ್ಗದ ಪ್ರಮುಖ ಹಡಗಾಗಿದೆ. ಈ INS ಶಿವಾಲಿಕ್ ಭಾರತ ನಿರ್ಮಿಸಿರುವ ಮೊದಲನೇಯ ರಹಸ್ಯ ಯುದ್ಧನೌಕೆಯಾಗಿದೆ, ಈ ನೌಕೆಯನ್ನು ಮುಂಬೈನ ಮಜಗಾನ್ ಡಾಕ್ ಲಿಮಿಟೆಡ್ (MDL)ನ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ಹಡಗು ನಿರ್ಮಾಣದ ಕಾರ್ಯವು 2001 ರಲ್ಲಿ ಆರಂಭವಾಗಿ 2009 ರ ವೇಳೆಗೆ ಪೂರ್ಣವಾಯಿತು, ಹಾಗೂ ಈ ಹಡಗು ತನ್ನ ಕಾರ್ಯವನ್ನು 2010 ರ ಏಪ್ರಿಲ್. 29 ರಂದು ಆರಂಭಿಸಿತು. ಶಿವಾಲಿಕ್ ಹಿಂದಿನ ತಲ್ವಾರ್-ಕ್ಲಾಸ್ ಫ್ರಿಗೇಟ್ಗಳಿಗಿಂತ ಸುಧಾರಿತ ಸ್ಟೆಲ್ತ್ ಮತ್ತು ಲ್ಯಾಂಡ್ ಅಟ್ಯಾಕ್ ಮಾಡುವ ವೈಶಿಷ್ಟ್ಯಗಳನ್ನು ಹೊಂದಿದೆ. ಅವಳು CODOG (ಸಂಯೋಜಿತ ಡೀಸೆಲ್ ಅಥವಾ ಗ್ಯಾಸ್) ಪ್ರೊಪಲ್ಷನ್ ಸಿಸ್ಟಮ್ ಅನ್ನು ಬಳಸಿದ ಮೊದಲ ಭಾರತೀಯ ನೌಕಾಪಡೆಯ ಹಡಗು.[8]