Job Description: * ಇದೀಗ ಕೇಂದ್ರ ಸರ್ಕಾರವು ರುಪೇ ಡೆಬಿಟ್(Rupay debit) ಕಾರ್ಡ್, ಹಾಗೂ ಭೀಮ್ ಯುಪಿಐ(BHIM UPI) ಮೂಲಕ ಸಣ್ಣ ಸಣ್ಣ ಮೊತ್ತದ ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನ ನೀಡಲು ಮುಂದಾಗಿದೆ. ಇದೀಗ ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್ ಯುಪಿಐ ನ ಡಿಜಿಟಲ್ ವಹಿವಾಟಿಗಾಗಿ 1300 ಕೋಟಿ ರೂ. ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ. * ಈ ಡಿಜಿಟಲ್ ವಹಿವಾಟಿನ ಯೋಜನೆಗಾಗಿ 6 ವರ್ಷದಲ್ಲಿ ಸುಮಾರು 76,000 ಕೋಟಿ ರೂ.ಗಳನ್ನೂ ಖರ್ಚು ಮಾಡಲಾಗುತ್ತದೆ, ಹಾಗೂ ಈ ಯೋಜನೆಯಿಂದಾಗಿ 2.5 ಲಕ್ಷ ಎಸ್‌ಸಿ(SC) ಮತ್ತು 2 ಲಕ್ಷ ಎಸ್‌ಟಿ(ST) ರೈತರು ಸೇರಿ ಸರಿ ಸುಮಾರು 22 ಲಕ್ಷ ರೈತರು ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. * ಇದೀಗ ದೇಶದಲ್ಲಿ (UPI)ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌'ನ ಮೂಲಕ ಅಕ್ಟೋಬರ್‌ ತಿಂಗಳಿನಲ್ಲಿ ಸರಿ ಸುಮಾರು 4 ಬಿಲಿಯನ್‌ ವಹಿವಾಟುಗಳು ನಡೆದಿವೆ, ಇದರಿಂದಾಗಿ ಹೊಸ ದಾಖಲೆಯನ್ನು ಸೃಷ್ಟಿಯಾಗಿದೆ, ಅಷ್ಟೇ ಅಲ್ಲದೇ ಹಬ್ಬಗಳ ಸಂಧರ್ಭದಲ್ಲಿ ಈ ವಹಿವಾಟು ದಾಖಲೆಯ ಮಟ್ಟವನ್ನು ತಲುಪಿದೆ. ಅದೇ ಅಕ್ಟೋಬರ್‌ ತಿಂಗಳಿನಲ್ಲಿ ಯುಪಿಐ(UPI)ನಲ್ಲಿ 7.71 ಟ್ರಿಲಿಯನ್ ಮೌಲ್ಯದ ದಾಖಲೆಯ 4.21 ಬಿಲಿಯನ್ ವಹಿವಾಟು ನಡೆದಿದೆ. ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ಯುಪಿಐ(UPI)ನಲ್ಲಿ 650 ಕೋಟಿ ರೂಪಾಯಿ ಮೌಲ್ಯದ 3.65 ಬಿಲಿಯನ್‌ ವಹಿವಾಟು ನಡೆದಿದೆ. * ಈ ಹಿನ್ನಲೆಯಿಂದಾಗಿ ಆರ್‌ಬಿಐ(RBI) ಯುಪಿಐ(UPI) ವಹಿವಾಟುನ್ನು ಹೆಚ್ಚಿಗೆ ಮಾಡಲು ಗಮನ ಹರಿಸಿದೆ, ಹಾಗೂ ಇತ್ತೀಚೆಗೆ ಕೇಂದ್ರ ಬ್ಯಾಂಕ್ ಆರ್‌ಬಿಐ ಫೀಚರ್ ಫೋನ್‌ಗಳಿಗಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಆರಂಭಿಸಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ತಿಳಿಸಿದ್ದರು.