Job Description: * ಇದೀಗ ಭಾರತವು ಸರಿ ಸುಮಾರು 35 ಮಿಲಿಯನ್ ಯುಎಸ್ ಡಾಲರ್, ಹಾಗೂ 10 ಮಿಲಿಯನ್ ಯುರೋಗಳಷ್ಟು ಆದಾಯವನ್ನು ಗಳಿಸಿದೆ, ಈ ಆದಾಯವು ಕಳೆದ ಮೂರು ವರ್ಷಗಳಲ್ಲಿ ವಿದೇಶಿ ಉಪಗ್ರಹಗಳ ಉಡಾವಣೆಯಿಂದ ಬಂದಿದೆ ಎಂದು ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಇಸ್ರೋ(ISRO) ತನ್ನ ವಾಣಿಜ್ಯ ವಿಭಾಗವಾಗಿರುವ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(NSIL) ಮುಖಾಂತರ ವಾಣಿಜ್ಯ ಆಧಾರದ ಮೇಲೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(PSLV) ನಲ್ಲಿ ಬೇರೆ ಬೇರೆ ದೇಶಗಳ ಉಪಗ್ರಹಗಳನ್ನು ಗಗನಕ್ಕೆ ಉಡಾವಣೆಯನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ. * ಇದೀಗ ಇಸ್ರೋ(ISRO) PSLV ಮುಖಾಂತರ ಬಾಹ್ಯಾಕಾಶಕ್ಕೆ ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲು 2021-2023ರ ಅವಧಿಯಲ್ಲಿ '4' ದೇಶಗಳೊಂದಿಗೆ '6' ಉಡಾವಣಾ ಒಪ್ಪಂದಗಳಿಗೆ ಸಹಿ ಹಾಕಿದೆ, ಈ ವಿದೇಶಿ ಉಪಗ್ರಹಗಳ ಉಡಾವಣೆಯಿಂದಾಗಿ ಸರಿ ಸುಮಾರು 132 ಮಿಲಿಯನ್ ಯುರೋಗಳಷ್ಟು ಆದಾಯವನ್ನು ಪಡೆಯಲಿದೆ ಎಂದಿದ್ದಾರೆ. * ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ನೀಡಿರುವ ಮಾಹಿತಿ ಪ್ರಕಾರ 12 ವಿದ್ಯಾರ್ಥಿ ನಿರ್ಮಿಸಿದ ಉಪಗ್ರಹಗಳು ಸೇರಿ ಒಟ್ಟಾರೆ 124 ಸ್ವದೇಶಿ ಉಪಗ್ರಹಗಳನ್ನು ಭೂ ಕಕ್ಷೆಯಲ್ಲಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ 34 ದೇಶಗಳ 342 ಉಪಗ್ರಹಗಳನ್ನು ಸ್ವದೇಶಿ ಉಡಾವಣಾ ವಾಹನಗಳ ಮುಖಾಂತರ ಬಾಹ್ಯಾಕಾಶಕ್ಕೆ ರವಾನಿಸಲಾಗಿದೆ. * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯು ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿದೆ, ಇದು ತನ್ನ ಪ್ರಧಾನ ಕಚೇರಿಯನ್ನು ಕರ್ನಾಟಕ ರಾಜ್ಯದ ಬೆಂಗಳೂರು ನಗರದಲ್ಲಿ ಹೊಂದಿದೆ, ಈ ಸಂಸ್ಥೆಯು ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಅಷ್ಟೇ ಅಲ್ಲದೇ ಈ ಸಂಸ್ಥೆಯನ್ನು ನೇರವಾಗಿ ಭಾರತದ ಪ್ರಧಾನ ಮಂತ್ರಿ ಮೇಲ್ವಿಚಾರಣೆ ಮಾಡುತ್ತಾರೆ, * ಇಸ್ರೋ ಸಂಸ್ಥೆಯು ಸ್ಥಾಪಕ ವಿಕ್ರಮ್ ಸಾರಾಭಾಯ್, ಇವರು ಇದನ್ನು 1969 ರ ಆಗಸ್ಟ್. 15 ರಂದು ಸ್ಥಾಪಿಸಿದ್ದಾರೆ, ಪ್ರಸ್ತುತ ಈ ಸಂಸ್ಥೆಯ ನಿರ್ವಾಹಕ ಮತ್ತು ನಿರ್ದೇಶಕ ಕೆ. ಶಿವನ್ ಅವರಿದ್ದಾರೆ. * ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು ಇಸ್ರೋ ಸಂಸ್ಥೆಯು ಉಪಸಂಸ್ಥೆಯಾಗಿದೆ, ಹಾಗೂ ಬಾಹ್ಯಾಕಾಶ ಇಲಾಖೆಯು ಇದರ ಪೋಷಕ ಸಂಸ್ಥೆಯಾಗಿದೆ.