Job Description: * ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಡಿಸೆಂಬರ್. 13 ರಂದು ವಾರಾಣಸಿಯ ಕೇಂದ್ರ ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ಕಾಶಿ ವಿಶ್ವನಾಥ ಕಾರಿಡಾರ್ ನ ಮೊದಲನೇ ಹಂತದ ಯೋಜನೆಯನ್ನು ಉದ್ಘಾಟಣೆಯನ್ನು ನೆರವೇರಿಸಿದ್ದಾರೆ. * ಪ್ರಸ್ತುತ ಕಾಶಿ ವಿಶ್ವನಾಥ ದೇಗುಲ ಕಾರಿಡಾರ್ ಯೋಜನೆಯು 5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗಲಿದೆ, ಅಷ್ಟೇ ಅಲ್ಲದೇ ಇದು ಪ್ರಧಾನಿ ಮೋದಿಯವರ ಕನಸಿನ ಯೋಜನೆ ಇದಾಗಿದೆ ಎಂದಿದ್ದಾರೆ. * ಇದೀಗ ಈ ಕಾರಿಡಾರ್ ನ ಮೊದಲ ಹಂತದ ಯೋಜನೆಯು ಸುಮಾರು 5 ಲಕ್ಷ ಚದರ ಅಡಿಗಳಲ್ಲಿ ನಿರ್ಮಾಣವಾಗಿದೆ, ಪ್ರಸ್ತುತ ಈ ಯೋಜನೆಯಿಂದಾಗಿ ಜನಸಂದಣಿ, ಹಾಗೂ ವಾಹನ ದಟ್ಟಣೆಯನ್ನು ನಿಯಂತ್ರಿಸುವದು, ಮತ್ತು ದೇವಾಲಯಗಳನ್ನೂ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಇಲಾಖೆಗೆ ಹೊಸ ರೂಪ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. * ಪ್ರಧಾನಿ ಮೋದಿ ಅವರು ಈ ಹಿಂದೆ 2019 ರ ಮಾರ್ಚ್ನಲ್ಲಿ ಆಧ್ಯಾತ್ಮಿಕ ಕೇಂದ್ರದ 'ಗತ ವೈಭವ'ವನ್ನು ಹೆಚ್ಚಿಸಿ ಇದನ್ನು ಮರುಸ್ಥಾಪನೆ ಮಾಡುವ ಉದ್ದೇಶದಿಂದ ಈ ಯೋಜನೆಗೆ ಅಡಿಗಲ್ಲು ಹಾಕಲಾಗಿದೆ ಎಂದಿದ್ದಾರೆ, ಅಷ್ಟೇ ಅಲ್ಲದೇ ಈ ಯೋಜನೆಯ ಒಟ್ಟು ವೆಚ್ಚ 800 ಕೋಟಿ ರೂ.ಆಗಲಿದೆ. * ಈ ಯೋಜನೆ ಅಡಿಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪ 50 ಅಡಿಯ ಕಾರಿಡಾರ್ ನಿರ್ಮಿಸಲಾಗುವದು, ಹಾಗೂ ಇದು ಗಂಗಾ ನದಿಯ ಎರಡು ಘಾಟ್ಗಳಿಗೆ ಸಂಪರ್ಕವನ್ನು ಹೊಂದಲಿದೆ, ಈ ಕಾರಿಡಾರ್ ಲಲಿತಾ ಘಾಟ್ನಿಂದ ನದಿಯನ್ನು ಹಾದು ದೇವಸ್ಥಾನದ ಆವರಣದಲ್ಲಿರುವ ಮಂದಿರ್ ಚೌಕ್ ವರೆಗೆ ಸಂಪರ್ಕ ಕಲ್ಪಿಸಲಿದೆ, ಈ 50 ಅಡಿ ಕಾರಿಡಾರ್ ಮೂಲಕ ಯಾತ್ರಾರ್ಥಿಗಳು ನೇರವಾಗಿ ದೇವಾಲಯಕ್ಕೆ ಪ್ರವೇಶವನ್ನು ಪಡೆಯಲಿದ್ದಾರೆ. * ಮೋದಿ ಅವರು 25 ಕಟ್ಟಡಗಳನ್ನು ಒಳಗೊಂಡಿರುವ ಯೋಜನೆಯನ್ನು ಉದ್ಘಾಟಿಸಿದರು, ಅವುಗಳು ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಲಭ್ಯ ಕೇಂದ್ರ, ವೇದ ಕೇಂದ್ರ, ಮುಮುಕ್ಷು ಭವನ, ಭೋಗಶಾಲಾ, ನಗರ ವಸ್ತುಸಂಗ್ರಹಾಲಯ, ವೀಕ್ಷಣಾ ಗ್ಯಾಲರಿ, ಆಹಾರ ಸ್ಥಳ ಹೀಗೆ ಇನ್ನು ಹಲವು ಯೋಜನೆಗಳು. * ಈ ಯೋಜನೆ ಅಡಿಯಲ್ಲಿ ಕಟ್ಟಡಗಳನ್ನು ಕೆಡುವಿ ಮರು ನಿರ್ಮಾಣ ಮಾಡುವ ಸಂಧರ್ಭದಲ್ಲಿ 40 ಕ್ಕೂ ಹೆಚ್ಚು ದೇವಾಲಯಗಳನ್ನು ಪತ್ತೆ ಮಾಡಲಾಗಿವೆ, ಈ ಎಲ್ಲ ದೇವಾಲಯಗಳಿಗೂ ಶತಮಾನಗಳ ಇತಿಹಾಸವನ್ನು ಹೊಂದಿವೆ, ಹಾಗೂ ಕಟ್ಟಡಗಳ ನಿರ್ಮಾಣದ ಹಂತದಲ್ಲಿ ಲಭಿಸಿರುವ ವಸ್ತುಗಳನ್ನು ದೆಹಲಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. * ಈ ಕಾರಿಡಾರ್ ಯೋಜನೆ ಅಡಿಯಲ್ಲಿ 'ಸ್ಮಾರ್ಟ್ ಸೂಚನಾ ಫಲಕಗಳನ್ನು' ಸ್ಥಾಪಿಸಲಾಗಿದೆ, ಈ ಫಲಕವು ವಾರಣಾಸಿಯಲ್ಲಿನ ಪಾರಂಪರಿಕ ತಾಣಗಳು, ಹಾಗೂ ನಗರದ 84 ಘಾಟ್ಗಳ ಸಾಂಸ್ಕೃತಿಕ ಪ್ರಾಮುಖ್ಯತೆಯ ಬಗೆಗಿನ ಮಾಹಿತಿಯನ್ನು ನೀಡಲಿದೆ ಎಂದಿದ್ದಾರೆ.