Job Description: * ಪ್ರಸ್ತುತ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಒಂದು ವಾರದ ಮಟ್ಟಿಗೆ ತಮ್ಮ ಸಂಸತ್ತನ್ನು ಅಮಾನತುಗೊಳಿಸಿ ಅನೌಪಚಾರಿಕ ಭೇಟಿಗಾಗಿ ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. * ಎರಡು ದಿನಗಳ ಹಿಂದೆ ಅಷ್ಟೇ ಸಂಸತ್ತಿನ ಅಧಿವೇಶನ ಮುಕ್ತಾಯಗೊಂಡದೆ, ಆದರೆ ಬರುವ ಜನೇವರಿ. 11 ರಿಂದ ಜರುಗಬೇಕಾಗಿರುವ ಅಧಿವೇಶನವು ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಅವರು ಸಿಂಗಪುರಕ್ಕೆ ಪ್ರಯಾಣ ಬೆಳಸಿದ್ದರಿಂದಾಗಿ, ಇದೀಗ ಈ ಅಧಿವೇಶನವು ಜನೇವರಿ.18 ರಿಂದ ನಡೆಯಲಿದೆ ಎನ್ನಲಾಗಿದೆ. * ಇದೇ ಡಿಸೆಂಬರ್. 12 ರಂದು ಅಧ್ಯಕ್ಷ ರಾಜಪಕ್ಸೆ ಅವರು ಗೆಜೆಟ್ ಅಧಿಸೂಚನೆಯೊಂದರ ಮೂಲಕ ಸಂಸತ್ತಿನ ಅಧಿವೇಶನವನ್ನು ಅಮಾನತುಗೊಳಿಸಿದ್ದಾರೆ, ಅಂದರೆ 2021 ರ ಡಿಸೆಂಬರ್ 12 ರ ಮಧ್ಯರಾತ್ರಿಯಿಂದ ಸಂಸತ್ತಿನ ಕಲಾಪವನ್ನು ಮೊಟಕುಗೊಳಿಸಿದ್ದಾರೆ, ಹಾಗೂ 2022 ರ ಜನೇವರಿ. 18 ರ ರಂದು ಮುಂದಿನ ಅಧಿವೇಶನಕ್ಕೆ ಕರೆನೀಡಿ ನಡೆಸಲಾಗುವದು ಎಂದು ಗೆಜೆಟ್ನ ಅಧಿಸೂಚನೆ ಮೂಲಕ ಮಾಹಿತಿಯನ್ನು ರವಾನಿಸಿದ್ದಾರೆ. * ಇದೀಗ ಶ್ರೀಲಂಕಾ ಅಧ್ಯಕ್ಷರ ಕಚೇರಿ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಇದು ಅಧ್ಯಕ್ಷ ರಾಜಪಕ್ಸೆ ಅವರ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ. * ಅಧ್ಯಕ್ಷ ರಾಜಪಕ್ಸೆ ಅವರ ಮಾಹಿತಿ: ಲೆಫ್ಟಿನೆಂಟ್ ಕರ್ನಲ್ ನಂದಸೇನ ಗೊಟಬಯ ರಾಜಪಕ್ಸೆ ಅವರು 1949 ರ ಜೂನ್. 20 ರಂದು ಜನಿಸಿದ್ದಾರೆ, ಇವರ ಒಬ್ಬ ಶ್ರೀಲಂಕಾದ ರಾಜಕಾರಣಿ ಹಾಗೂ ಮಾಜಿ ಮಿಲಿಟರಿ ಅಧಿಕಾರಿಯಾಗಿದ್ದಾರೆ, ಈ ಹಿಂದೆ 2019 ರಿಂದ ಶ್ರೀಲಂಕಾದ 8ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಅಷ್ಟೇ ಅಲ್ಲದೇ ಇವರು ಈ ಹಿಂದೆ ತಮ್ಮ ಹಿರಿಯ ಸಹೋದರ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಆಡಳಿತದಲ್ಲಿ ಅಂದರೆ 2005 ರಿಂದ 2015 ರವರೆಗೆ ರಕ್ಷಣಾ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. * ರಾಜಪಕ್ಸೆ ಅವರು 1971 ರ ಏಪ್ರಿಲ್ ನಲ್ಲಿ ಶ್ರೀಲಂಕಾ ಸೇನೆಗೆ ಸೇವೆ ಸಲ್ಲಿಸಲು ಸೇರಿದರು, ಹಾಗೂ 1987-1989 JVP ದಂಗೆಯ ಸಂಧರ್ಭದಲ್ಲಿ ಪ್ರತಿ-ಬಂಡಾಯ ಕಾರ್ಯಾಚರಣೆಗಳಾಗಿ ಸೈನ್ಯದಿಂದ ಬೇಗನೆ ನಿವೃತ್ತಿ ಪಡೆದರು. ಹಾಗೂ ತದನಂತರ 2018 ರಲ್ಲಿ, ಅವರು 2019 ರ ಅಧ್ಯಕ್ಷೀಯ ಚುನಾವಣೆಗೆ ಸಂಭವನೀಯ ಅಭ್ಯರ್ಥಿಯಾಗಿ ಹೊರಹೊಮ್ಮಿದರು, ಇವರು ಶ್ರೀಲಂಕಾದ ಅಧ್ಯಕ್ಷರಾಗಿ ಚುನಾಯಿತರಾದ ಮೊದಲ ಮಿಲಿಟರಿ ಹಿನ್ನೆಲೆಯ ವ್ಯಕ್ತಿಯಾಗಿದ್ದಾರೆ.