Job Description: * ಇದೀಗ ರಿಲಯನ್ಸ್ ಜಿಯೋ (Reliance Jio) ಸಂಸ್ಥೆಯು ಸಿಡಿಪಿ(CDP) ನೀಡುವ 'A-' ದರ್ಜೆಯನ್ನು ಪಡೆದುಕೊಂಡಿದೆ, ಪ್ರಸ್ತುತ ಸಿಡಿಪಿ ಪರಿಸರಕ್ಕೆ ಹಾನಿಮಾಡದೇ, ಇಂಗಾಲ ಹೊರಸೂಸುವಿಕೆ ನಿಯಂತ್ರಿಸುವ ಹಾಗೂ ಅದರ ಅಂಕಿಅಂಶಗಳನ್ನು ತಿಳಿಸುವ ಸ್ವಚ್ಛ ಕಂಪನಿಗಳಿಗೆ ಈ 'A-' ದರ್ಜೆಯನ್ನು ನೀಡಲಾಗುತ್ತದೆ. * ರಿಲಯನ್ಸ್ ಜಿಯೋ 2035 ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವ ಕಂಪನಿಯಾಗುವ ಗುರಿಯನ್ನು ಹೊಂದಿದೆ. * ಪ್ರಸ್ತುತ ರಿಲಯನ್ಸ್ ಜಿಯೋ 2021 ನೇ ಸಾಲಿನಲ್ಲಿ ಸಿಡಿಪಿ(CDP) (ಕಾರ್ಬನ್ ಡಿಸ್ಕ್ಲೋಷರ್ ಪ್ರಾಜೆಕ್ಟ್)ಯ 'A-' ದರ್ಜೆ ಪಡೆದಕೊಂಡಿರುವ ದೇಶದ ಏಕೈಕ ಟೆಲಿಕಾಂ ಅಥವಾ ಡಿಜಿಟಲ್ ಕಂಪನಿ ಇದಾಗಿದೆ, ಇದೇ ಕಂಪನಿ ಕಳೆದ ವರ್ಷ 'B' ದರ್ಜೆ ಪಡೆದುಕೊಂಡಿತ್ತು, ಆದರೆ ಈ ವರ್ಷ 'A-' ದರ್ಜೆ ಪಡೆದುಕೊಂಡಿದೆ, ಈ ಮಾಹಿತಿಯನ್ನು ರಿಲಯನ್ಸ್ ಜಿಯೋ ತನ್ನ ವೆಬ್ಸೈಟ್ನಲ್ಲಿ ವರದಿ ಮಾಡಿದೆ. * ಭಾರ್ತಿ ಏರ್ಟೆಲ್(Airtel) ಕಳೆದ ವರ್ಷ 'D-' ದರ್ಜೆಪಡೆದುಕೊಂಡಿತ್ತು, ಈ ವರ್ಷ ಅಂದರೆ 2021 ನೇ ಸಾಲಿನಲ್ಲಿ 'C' ದರ್ಜೆಯನ್ನು ಪಡೆದುಕೊಂಡಿದೆ. * ಇದೀಗ ಸುಮಾರು 272 ಕಂಪನಿಗಳು ಜಗತ್ತಿನಾದ್ಯಂತ 12 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿವೆ ಈ ಎಲ್ಲ ಕಂಪನಿಗಳು ಕೈಗೊಂಡಿರುವ ಹವಾಮಾನ ಬದಲಾವಣೆ, ಪರಿಸರ ರಕ್ಷಣೆ, ಅರಣ್ಯ ಹಾಗೂ ನೀರಿನ ಸುರಕ್ಷತೆ ಮೇಲಿನ ಕಾರ್ಯಕ್ಷಮತೆ ಆಧಾರದ ಮೇಲೆ ಈ ದರ್ಜೆ ಪಡೆದುಕೊಂಡಿವೆ. * ಪ್ರಸ್ತುತ ಸಿಡಿಪಿ(CDP) ಯನ್ನು 2000 ರಲ್ಲಿ ಸ್ಥಾಪಿಸಲಾಗಿದೆ, ಇದು 110 ಟ್ರಿಲಿಯನ್ ಡಾಲರ್ ಕ್ಕೂ ಅಧಿಕ ಆಸ್ತಿ ಹೊಂದಿರುವ 590 ಹೂಡಿಕೆದಾರರು, ಹಾಗೂ ಸುಮಾರು 5.5 ಟ್ರಿಲಿಯನ್ ಡಾಲರ್ ಮೌಲ್ಯದ ಖರೀದಿದಾರರನ್ನು ಹೊಂದಿ ಪರಿಸರ ಸಂರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದೆ. * ಕಂಪನಿಗಳಿಗೆ ಸಿಡಿಪಿ 'D-' ದರ್ಜೆಯಿಂದ 'A' ದರ್ಜೆವರೆಗೆ ನೀಡಲಾಗುತ್ತದೆ ನೀಡುತ್ತದೆ. - 'A' ಅಥವಾ 'A -' ದರ್ಜೆಗೇರಿದವರು ನಾಯಕತ್ವದ ಮಟ್ಟ ಎಂದರ್ಥ. - 'B'ಅಥವಾ 'B-' ದರ್ಜೆ ಹೊಂದಿರುವವರು ನಿರ್ವಹಣಾ ಮಟ್ಟ ಎಂದರ್ಥ. - 'C' ಮತ್ತು 'C -' ದರ್ಜೆ ಹೊಂದಿರುವ ಸಂಸ್ಥೆಗಳು ಅರಿವಿನ ಮಟ್ಟ ಎಂದರ್ಥ. - 'D' ಮತ್ತು 'D -' ದರ್ಜೆ ಹೊಂದಿರುವವರು ಇಂಗಾಲ ಪ್ರಮಾಣ ಬಹಿರಂಗಪಡಿಸುವಿಕೆಯ ಆರಂಭಿಕ ಮಟ್ಟ ಎಂದು ಪರಿಗಣಿಸಲಾಗುತ್ತದೆ. * CDP (Carbon Disclosure Project): ಎಂಬುದು ಹೂಡಿಕೆದಾರರು, ಕಂಪನಿಗಳು, ನಗರಗಳು, ರಾಜ್ಯಗಳು ಮತ್ತು ಪ್ರದೇಶಗಳಿಗೆ ತಮ್ಮ ಪರಿಸರದ ಪ್ರಭಾವಗಳನ್ನು ನಿರ್ವಹಿಸಲು ಜಾಗತಿಕ ಬಹಿರಂಗಪಡಿಸುವಿಕೆಯ ವ್ಯವಸ್ಥೆಯನ್ನು ನಡೆಸುವ ಚಾರಿಟಿಯಾಗಿದೆ.