Job Description: * ಪ್ರಸ್ತುತ ಡಾ.ಎಂ.ಬಿ.ದಳಪತಿ ಅವರು ವಿದ್ಯಾರ್ಥಿಗಳಿಗೆ ಶಿಸ್ತು, ನಾಯಕತ್ವದ ಗುಣಗಳನ್ನು ಬೆಳೆಸಲು, ಸಾಮಾಜಿಕ ಕಳಕಳಿಯ ಮಾಹಿತಿ ನೀಡುತ್ತಾ ಸಾಗಿದ್ದಾರೆ ಇದೀಗ ಇವರು ಅತ್ಯುತ್ತಮ ಸಂಯೋಜನಾಧಿಕಾರಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. * ಇದೀಗ ಡಾ.ಎಂ.ಬಿ.ದಳಪತಿ ಅವರು ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್, ಕಾರ್ಯಕ್ರಮದ ಸಂಯೋಜನಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇದೀಗ ಇವರಿಗೆ 2019-20ನೇ ಸಾಲಿನ ರಾಜ್ಯ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಯಿಂದ ನೀಡುವ 'ಅತ್ಯುತ್ತಮ ಎನ್.ಎಸ್.ಎಸ್, ಕಾರ್ಯಕ್ರಮ ಸಂಯೋಜನಾಧಿಕಾರಿ ರಾಜ್ಯ ಪ್ರಶಸ್ತಿ' ದೊರಕಿದೆ. * ಅಷ್ಟೇ ಅಲ್ಲದೇ ಈ ಹಿಂದೆ 2007-08ರಲ್ಲಿ ಇವರಿಗೆ ಅತ್ಯುತ್ತಮ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ರಾಜ್ಯ ಪ್ರಶಸ್ತಿಯು ಲಭಿಸಿತ್ತು. * ಡಾ. ದಳಪತಿ ಅವರು ಈ ಹಿಂದೆ 2017 ರಿಂದ 15ನೇ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. * ಪ್ರಸ್ತುತ ವಿ.ವಿ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ, ಮತ್ತು ಉತ್ತರಕನ್ನಡ ಜಿಲ್ಲೆಗಳ 187 ಕಾಲೇಜುಗಳಲ್ಲಿ ಒಟ್ಟು 209 ಎನ್.ಎಸ್.ಎಸ್ ಘಟಕಗಳಿವೆ. * ಡಾ. ದಳಪತಿ ಅವರು ಶೌಚಾಲಯ ಜಾಗೃತಿಯನ್ನು ಮೂಡಿಸಿದ್ದಾರೆ: ಈ ಮೊದಲು 2017-18ನೇ ಸಾಲಿನಲ್ಲಿ ದತ್ತು ಗ್ರಾಮಗಳಲ್ಲಿ ವಾರ್ಷಿಕ ವಿಶೇಷ ಶಿಬಿರಗಳನ್ನು ಸಂಘಟಿಸಿ, ಅಲ್ಲಿ 3,558 ಶೌಚಾಲಯಗಳನ್ನು ಸ್ವಯಂ ಸೇವಕರಿಂದ ಕಟ್ಟಿಸಿದ್ದಾರೆ, ಹಾಗೂ ಬಯಲು ಶೌಚಮುಕ್ತ ಗ್ರಾಮವಾಗಿ ಪರಿವರ್ತಿಸಲು ಸ್ವಯಂ ಸೇವಕರು ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. * ಪ್ರಸ್ತುತ ರಾಜ್ಯ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ನೀಡುವ 2019-20ನೇ ಸಾಲಿನ ಅತ್ಯುತ್ತಮ 'ಎನ್.ಎಸ್.ಎಸ್ ವಿಶ್ವವಿದ್ಯಾಲಯ' ಪ್ರಶಸ್ತಿಯ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಲಭಿಸಿದೆ. * ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ 2017ರಿಂದ 2020ರವರೆಗೆ ಪ್ರತಿ ವರ್ಷವು ಸುಮಾರು 209 ಗ್ರಾಮಗಳನ್ನು ದತ್ತು ಪಡೆದುಕೊಂಡು ವಾರ್ಷಿಕವಾಗಿ ವಿಶೇಷ ಶಿಬಿರಗಳನ್ನು ನಿಯೋಜಿಸಿದೆ, ಹಾಗೂ ಇದೇ ಯೋಜನೆ ಮೂಲಕ ಸ್ವಯಂ ಸೇವಕರು ಪರಿಸರ ಸಂರಕ್ಷಣೆಗಾಗಿ 61,580 ಸಸಿಗಳನ್ನು ನೆಟ್ಟಿದ್ದಾರೆ ಮತ್ತು ಅವುಗಳನ್ನು ಪೋಷಿಸಿದ್ದಾರೆ, ಇದಷ್ಟೇ ಅಲ್ಲದೇ ಪರಿಸರದ ಉಳಿವಿವಾಗಿ 2,650 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.