Job Description: * ಇದೀಗ ಅಮೇರಿಕ ದೇಶವು ಚೀನಾ, ಮ್ಯಾನ್ಮಾರ್, ಉತ್ತರಕೊರಿಯಾ ಹಾಗೂ ಬಾಂಗ್ಲಾದೇಶಗಳ ಜೊತೆಗೆ ಸಂಬಂಧ ಹೊಂದಿರುವ ಕೆಲ ವ್ಯಕ್ತಿಗಳು, ಮತ್ತು ಸಂಸ್ಥೆಗಳ ಮೇಲೆ ಇದೀಗ ಅಮೇರಿಕ ರಾಷ್ಟ್ರವು ವ್ಯಾಪಕ ಮಾನವಹಕ್ಕುಗಳಿಗೆ ಸಂಬಂಧಿಸಿರುವ ನಿರ್ಬಂಧಗಳನ್ನು ಜಾರಿಗೆ ತಂದಿದೆ, ಇದಷ್ಟೇ ಅಲ್ಲದೇ ಚೀನಾ ದೇಶದ ಕೃತಕ ಬುದ್ಧಿಮತ್ತೆ ಸಂಸ್ಥೆ ಸೆನ್ಸ್ಟೈಮ್ ಸಮೂಹ ಸಂಸ್ಥೆಯನ್ನು ಹೂಡಿಕೆಯನ್ನು ಬ್ಲ್ಯಾಕ್ಲಿಸ್ಟ್ಗೆ ಸೇರಿಸಿದೆ ಅಮೇರಿಕ. * ಇದರ ನಡುವೆ ಕೆನಡಾ ಮತ್ತು ಬ್ರಿಟನ್ ರಾಷ್ಟ್ರಗಳು ಮ್ಯಾನ್ಮಾರ್ ದೇಶದಲ್ಲಿ ವ್ಯಾಪಕ ಮಾನವ ಹಕ್ಕು ಉಲ್ಲಂಘನೆಯಾಗಿರುವ ಹಿನ್ನಲೆಯಿಂದಾಗಿ ಮ್ಯಾನ್ಮಾರ್ ದೇಶದ ವಿರುದ್ಧ ನಿರ್ಬಂಧವನ್ನು ಹೇರಿದೆ. * ಜೋ ಬೈಡನ್ ಅವರು ಅಮೇರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಉತ್ತರ ಕೊರಿಯಾ ರಾಷ್ಟ್ರದ ವಿರುದ್ಧ ಜಾರಿಯಾಗಿರುವ ಪ್ರಥಮ ನಿರ್ಬಂಧ ಇದಾಗಿದೆ. * ಇದೀಗ ಅಮೇರಿಕ ರಾಷ್ಟ್ರವು ತಗೆದುಕೊಂಡಿರುವ ಕ್ರಮವು, ಬ್ರಿಟನ್ ಹಾಗೂ ಕೆನಡಾ ದೇಶಗಳ ಸಹಭಾಗಿತ್ತ್ವದಲ್ಲಿ ಕೈಗೊಳ್ಳಲಾಗಿದೆ ಎಂದು ಅಮೇರಿಕ ಖಜಾನೆ ಇಲಾಖೆಯ ಸಹಾಯಕ ಕಾರ್ಯದರ್ಶಿ ವ್ಯಾಲಿ ಅಡ್ಯೆಮೊ ಅವರು ತಿಳಿಸಿದ್ದಾರೆ. * ಪ್ರಸ್ತುತ ವಾಷಿಂಗ್ಟನ್ನಲ್ಲಿ ಇರುವ ಚೀನಾ ರಾಷ್ಟ್ರದ ರಾಯಭಾರ ಕಚೇರಿಯು ಅಮೇರಿಕ ರಾಷ್ಟ್ರದ ಈ ಕ್ರಮವನ್ನು ಖಂಡಿಸಿದೆ, ಅಷ್ಟೇ ಅಲ್ಲದೇ ಈ ಕ್ರಮದಿಂದಾಗಿ ಚೀನಾ - ಅಮೇರಿಕ ದೇಶಗಳ ವ್ಯವಹಾರಗಳಿಗೆ ಹಾನಿ ಉಂಟಾಗಬಹುದು ಎಂದು ಚೀನಾ ರಾಯಭಾರಿ ಕಚೇರಿಯ ವಕ್ತಾರ ಲಿಯು ಪೆಂಗ್ಯು ಅವರು ಹೇಳಿಕೆ ನೀಡಿದ್ದಾರೆ. * ಇತ್ತೀಚಿಗೆ ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರು ಶೃಂಗಸಭೆಯಲ್ಲಿ ಭಾಗಿಯಾಗಿರುವ 100ಕ್ಕೂ ಅಧಿಕ ಮುಖಂಡರು ನೀಡಿರುವ ಬದ್ಧತೆಯಿಂದ ವಿಶ್ವಾದಾದ್ಯಂತ ಹೆಚ್ಚುತ್ತಿರುವ ನಿರಂಕುಶ ಆಡಳಿತದ ಹಿನ್ನಡೆಯಿಂದಾಗಿ ಎಂದು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿರುವ 2 ದಿನ ಜರುಗಿರುವ ವಿಡಿಯೋ ಕಾನ್ಫರೆನ್ಸ್ ಶೃಂಗಸಭೆ ಬಳಿಕ ಅಧ್ಯಕ್ಷ ಬೈಡನ್ ಅವರು ತಿಳಿಸಿದ್ದಾರೆ.