Job Description: * ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬಲರಾಮಪುರ ಪ್ರದೇಶದಿಂದ ಪಂಚ ನದಿ ಯೋಜನೆಗೆ ಚಾಲನೆ ನೀಡಿದ್ದಾರೆ, ಈ ಯೋಜನೆಯಿಂದಾಗಿ ಪಶ್ಚಿಮ ಉತ್ತರ ಪ್ರದೇಶದ '9' ಜಿಲ್ಲೆಗಳ 14 ಲಕ್ಷ ಪ್ರದೇಶಗಳಿಗೆ ನೀರನ್ನು ಒದಗಿಸುವ ಯೋಜನೆಗೆ ಇದಾಗಿದೆ. * ಪಂಚ ನದಿ ಯೋಜನೆ: ಘಾಘ್ರಾ, ಸರಯೂ, ರಫ್ತಿ, ಬಂಗಾಂಗಾ, ರೋಹಿಣಿ ಎಂಬ ಐದು ನದಿಗಳನ್ನು ಜೋಡಿಸಿ ಈ ಪಂಚ ನದಿ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ, ಇದಕ್ಕೆ ಸರಯೂ ರಾಷ್ಟ್ರೀಯ ಕಾಲುವೆ ಯೋಜನೆ ಎಂದು ಕರೆಯಲಾಗುತ್ತದೆ. * ಉತ್ತರ ಪ್ರದೇಶದ ಬಲರಾಮಪುರದಲ್ಲಿ ಆಯೋಜಿಸಲಾಗಿರುವ ರ್ಯಾಲಿಯಲ್ಲಿ ಮೋದಿ ಅವರು ರೈತರನ್ನ ಉದ್ದೇಶಿಸಿ ಮಾತನಾಡಿದರು, ಹಾಗೂ ಇದೇ ಡಿ.16 ರಂದು ಸಹಜ ಕೃಷಿ ಬಗ್ಗೆ ನಿಯೋಜಿಸಲಾಗಿರುವ ಕಾರ್ಯಕ್ರಮವನ್ನು ರೈತರೆಲ್ಲರೂ ಕೃಷಿ ವಿಜ್ಞಾನ ಕೇಂದ್ರ ಅಥವಾ ಟಿವಿ ಚಾನಲ್ ಗಳ ಮೂಲಕ ನೀಡಬೇಕೆಂದು ರೈತರಲ್ಲಿ ಕೇಳಿಕೊಂಡಿದ್ದಾರೆ. * ಈ ಯೋಜನೆಯನ್ನು 1976 ರಲ್ಲಿ ತಗೆದುಕೊಳ್ಳಲಾಗಿದೆ, ಹಾಗೂ ಇದರ ಮಾಹಿತಿ: - ಈ ಯೋಜನೆಯಿಂದಾಗಿ 14 ಲಕ್ಷ ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ, ಇದರಿಂದಾಗಿ 29 ಲಕ್ಷ ರೈತರಿಗೆ ಲಾಭವಾಗಲಿದೆ. - ಪೂರ್ವ ಉತ್ತರ ಪ್ರದೇಶದ ಬಹರ್ಚಿಯಾ, ಶ್ರಾವಸ್ತಿ, ಬಲರಾಮಪುರ, ಗೊಂಡಾ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್ನಗರ್, ಗೋರಖ್ಪುರ, ಮಹಾರಾಜ್ಗಂಜ್, ಈ 09 ಜಿಲ್ಲೆಗಳ ಗ್ರಾಮಗಳಲ್ಲಿ ಬರುವಂತಹ ಜನತೆಗೆ ಲಾಭವಾಗಲಿದೆ. - ಈ ಹಿಂದೆ 1978 ರಲ್ಲಿ ಈ ಪಂಚ ನದಿ ಯೋಜನೆ ಸ್ಥಾಪನೆ ಮಾಡಲಾಗಿದೆ, ಹಾಗೂ ಇದನ್ನು 2016 ರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯೀ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಮಾಡಲಾಯಿತು. - ಈ ಪಂಚ ನದಿಗಳ ಯೋಜನೆಗಾಗಿ, ಘಾಘ್ರಾ, ಸರಯೂ, ರಪ್ತಿ, ಬಂಗಾಂಗ, ರೋಹಿಣಿ, ನದಿಗಳ ಜೋಡಣೆಯನ್ನು ಮಾಡಲಾಗಿದೆ. * ಈ ಪಂಚ ನದಿ ಯೋಜನೆಗೆ 9,802 ಕೋಟಿ ರೂ. ವೆಚ್ಚ ತಗುಲಲಿದೆ, ಇಲ್ಲಿಯವರೆಗೆ 4,600 ಕೋಟಿ ರೂ. ವೆಚ್ಚವನ್ನು ಬರಿಸಲಾಗಿದೆ ಎಂದು ತಿಳಿಸಿದ್ದಾರೆ.