Job Description: * ಪ್ರಸ್ತುತ DRDO ಅಭಿವೃದ್ಧಿಪಡಿಸಿರುವ ವಿಸ್ತೃತ ದೂರದ ಪಿನಾಕ (Pinaka-ER) ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ ಸಿಸ್ಟಮ್ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. * ಈ ಪಿನಾಕ ರಾಕೆಟ್ ವ್ಯವಸ್ಥೆಯನ್ನು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿನ ಪೋಖ್ರಾನ್ ಪ್ರದೇಶದಲ್ಲಿ ಪರೀಕ್ಷಿಸಲಾಗಿದೆ. * DRDO ಹಾಗೂ ಖಾಸಗಿ ವಲಯದ ಉದ್ದಿಮೆ ಸಹಾಯದೊಂದಿಗೆ ಈ ರಾಕೆಟ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ, ಹಾಗೂ ಇದರ ತಂತ್ರಜ್ಞಾನವನ್ನು DRDO ಖಾಸಗಿ ಉದ್ದಿಮಕ್ಕೆ ನೀಡಿದೆ. * ಈ ಪಿನಾಕ ರಾಕೆಟ್ ವ್ಯವಸ್ಥೆಯನ್ನು ಭಾರತೀಯ ಸೇನೆಯ ಸಹಯೋಗದಲ್ಲಿ DRDO ತಜ್ಞರು '3' ದಿನಗಳ ಕಾಲ ಪರೀಕ್ಷೆಯನು ನಡೆಸಿ ಇದರ ಕಾರ್ಯಕ್ಷಮತೆಯ ಮತ್ತು ಮೌಲ್ಯಮಾಪನ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. * ಈ ರಾಕೆಟ್'ಗೆ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ ಸಿಡಿತಲೆಗಳನ್ನು ಅಳವಡಿಸಲಾಗಿತ್ತು, ಹಾಗೂ ಈ ಎಲ್ಲ ಸಿಡಿತಲೆಗಳನ್ನು ಹೊತ್ತ 24 ರಾಕೆಟ್ಗಳು ನಿರ್ದಿಷ್ಟ ಗುರಿ ತಲುಪುವಲ್ಲಿ ಯಶಸ್ವಿಯಾಗಿವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. * ಪ್ರಸ್ತುತ ಈ "ಪಿನಾಕ ಎಂಕೆ-1" ರಾಕೆಟ್ ವ್ಯವಸ್ಥೆಯು ಸರಿ ಸುಮಾರು 40 ಕಿ.ಮೀ. ದೂರದವರೆಗೆ ಚಿಮ್ಮುವ ಸಾಮರ್ಥ್ಯ ಹೊಂದಿದೆ, ಮತ್ತು "ಪಿನಾಕ-2"ರ ಸಾಮರ್ಥ್ಯ ಸರಿ ಸುಮಾರು 60 ಕಿ.ಮೀ. ದೂರದವರೆಗೆ ಚಿಮ್ಮುವ ಸಾಮರ್ಥ್ಯ ಹೊಂದಿರಲಿದೆ, ಆದರೆ ಇದೀಗ ಈ ಪಿನಾಕ-ಇಆರ್ ರಾಕೆಟ್ ವ್ಯವಸ್ಥೆಯು ಎಷ್ಟು ದೂರ ಕ್ರಮಿಸಿದೆ ಎಂಬ ತಕ್ಷಣದ ಮಾಹಿತಿಯನ್ನು ಸಚಿವಾಲಯ ತಿಳಿಸಿಲ್ಲ. * ಈ ಹೊಸ ಪಿನಾಕಾ-ಇಆರ್ ರಾಕೆಟ್ ಸರಿ ಸುಮಾರು 70 ಕಿಮೀ ವ್ಯಾಪ್ತಿಯವಾರೆಗೆ ಚಿಮ್ಮಲಿದೆ, ಆದರೆ ಒಂದು ದಶಕದಿಂದ ಭಾರತೀಯ ಸೇನಾ ಪಡೆಗಳು ಸುಮಾರು 45 ಕಿ.ಮೀ. ದೋರ ಕ್ರಮಿಸಬಲ್ಲ ಹಾಗೂ ಸದ್ಯ ಅಸ್ತಿತ್ವದಲ್ಲಿರುವ ಕ್ಷಿಪಣಿ ಹೊಂದಿದೆ. * ಈ ಪಿನಾಕಾ ರಾಕೆಟ್'ನ್ನು DRDO, ಆರ್ಮಮೆಂಟ್ ರಿಸರ್ಚ್ & ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ARDE) ಪುಣೆ, ಹಾಗೂ ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೋರೇಟರಿ (HEMRL), ಪುಣೆ ಜಂಟಿಯಾಗಿ ವಿನ್ಯಾಸಗೊಳಿಸಿವೆ.