Job Description: * ಇದೆ ಮೊದಲ ಬಾರಿಗೆ ಭಾರತ ಗಣರಾಜ್ಯೋತ್ಸವದ(2022) ಮುಖ್ಯ ಅತಿಥಿಗಳಾಗಿ ಕಝಾಕಿಸ್ತಾನ್, ಕಿರ್ಗಿಸ್ತಾನ್, ತುರ್ಕಮೆನಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಎಂಬ ಐದು ಮಧ್ಯ ಏಷ್ಯಾದ ದೇಶಗಳನ್ನು ಭಾರತ ಆಹ್ವಾನಿಸಿದೆ. * ಮೊದಲ ಬಾರಿಗೆ, ಎಲ್ಲಾ ಐದು ಮಧ್ಯ ಏಷ್ಯಾದ ದೇಶಗಳು ಜನವರಿ 26, 2022 ರಂದು ಭಾರತದ 73 ನೇ ಗಣರಾಜ್ಯೋತ್ಸವಕ್ಕೆ ಹಾಜರಾಗಲಿವೆ. ಗಣರಾಜ್ಯೋತ್ಸವ ದಿನದ ವಿಶೇಷ : * ಭಾರತ ದೇಶವು 26 ಜನೆವರಿ 1950 ರಂದು ಭಾರತದ ಸಂವಿಧಾನವನ್ನು ಜಾರಿಗೆ ತಂದಿತು. ಆ ದಿನದ ಸವಿ ನೆನಪಿಗೋಸ್ಕರ ಗಣರಾಜ್ಯೋತ್ಸವವು ಭಾರತದಲ್ಲಿ ಒಂದು ಆಚರಣೆ ಹಾಗೂ ರಾಷ್ಟ್ರೀಯ ರಜಾ ದಿನವಾಗಿದೆ. * ಜನವರಿ 26 ರಂದೇ ಗಣರಾಜ್ಯೋತ್ಸವ ಆಚರಿಸಲು ಕಾರಣವೆಂದರೆ ದಿನಾಂಕ : 26/ಜನವರಿ/1929 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 'ಭಾರತೀಯ ಸ್ವಾತಂತ್ರ್ಯದ ಘೋಷಣೆ (ಪೂರ್ಣ ಸ್ವರಾಜ್)' ಅನ್ನು ಘೋಷಿಸಿತು.