Job Description: * ಇದೀಗ ಅರಣ್ಯ ಇಲಾಖೆಯು ಇದೇ ಡಿ.18, 19ರಂದು ಅಳಿವಿನಂಚಿನಲ್ಲಿರುವ ಪಶ್ಚಿಮಘಟ್ಟದ ಕಪ್ಪೆ ಪ್ರಭೇದಗಳ ಉಳಿವಿಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಸಾಗರ ತಾಲ್ಲೂಕು ಮುಪ್ಪಾನೆ ನಿಸರ್ಗಧಾಮದಲ್ಲಿ 'ಕಪ್ಪೆ ಹಬ್ಬ' ಆಚರಿಸಲು ಆಯೋಜಿಸಲಾಗಿದೆ. * ರೈತರ ಮಿತ್ರ ಕಪ್ಪೆಗಳ ಸಂತತಿಯು ಅಳಿವಿನಂಚಿನೆಡೆಗೆ ಸಾಗುತ್ತಿದೆ ಎಂದು ಅರಣ್ಯ ಇಲಾಖೆಯು ತನ್ನ ಅಭಿಪ್ರಾಯವನ್ನು ತಿಳಿಸಿದೆ. * ಈ 'ಕಪ್ಪೆ ಹಬ್ಬ'ದಲ್ಲಿ, ಕಪ್ಪೆಗಳ ಸಂತತಿಯನ್ನು ಸಂರಕ್ಷಿಸಲು, ಚರ್ಚೆ, ಸಾಕ್ಷ್ಯ ಚಿತ್ರಗಳ ಪ್ರದರ್ಶನ, ಸಂಶೋಧನಾ ಪ್ರಬಂಧಗಳ ಮಂಡನೆ, ವಿವಿಧ ಪ್ರಭೇದಗಳು, ಸಂತಾನೋತ್ಪತ್ತಿ ಪ್ರಕ್ರಿಯೆ, ಕಪ್ಪೆಗಳ ಮಾಹಿತಿ ಲಭ್ಯವಾಗಲಿದೆ, ಅಷ್ಟೇ ಅಲ್ಲದೇ ಬಿದಿರು ಕಪ್ಪೆಗಳು, ಕರಾವಳಿ ಸ್ಕಿಟರಿಂಗ್, ಕಾಮನ್ ಟೋಡ್, ಬುಲ್ ಫ್ರಾಗ್'ನ ವಿಶೇಷ ಮಾಹಿತಿಯನ್ನು ವಿಚಾರ ವಿನಿಮಯ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಅಲ್ಲಿನ ಪರಿಸರವಾದಿಗಳು ಪಶ್ಚಿಮಘಟ್ಟಗಳಲ್ಲಿ ಕಾಣಸಿಗುವ ಮಲಬಾರ್ ಟ್ರೀ ಟೋಡ್ ಪ್ರಭೇದದ ಕಪ್ಪೆಯನ್ನು ರಾಜ್ಯ ಕಪ್ಪೆ ಎಂದು ಘೋಷಣೆ ಮಾಡಬೇಕು ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ. * ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರು ಇದೇ ಡಿಸೆಂಬರ್. 18 & 19ಕ್ಕೆ ನಿಯೋಜಿಸಲಾಗಿರುವ ಕಪ್ಪೆ ಹಬಕ್ಕೆ ಚಾಲನೆ ನೀಡಲಿದ್ದಾರೆ.