Job Description: * ಇದೀಗ ಸೌದಿ ಅರೇಬಿಯಾ ಸರ್ಕಾರವು 'ತಬ್ಲಿಗಿ ಜಮಾತ್' ಸಂಘಟನೆಯನ್ನು ನಿಷೇಧಿಸಿದೆ, ಈ ತಬ್ಲಿಗಿ ಜಮಾತ್ ಸಮಾಜಕ್ಕೆ ಅಪಾಯ, ಹಾಗೂ ಭಯೋತ್ಪಾದನೆಗೆ ಒಂದು ಹೆಬ್ಬಾಗಿಲು ಎಂದು ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು ಮಾಹಿತಿಯನ್ನು ನೀಡಿದೆ. * ಪ್ರಸ್ತುತ ಸೌದಿ ಅರೇಬಿಯಾ ಸರ್ಕಾರದ ಇಸ್ಲಾಮಿಕ್ ವ್ಯವಹಾರಗಳ ಖಾತೆ ಸಚಿವರಾಗಿರುವ ಡಾ.ಅಬ್ದುಲ್ಲಾತಿಫ್ ಅಲ್_ಅಲ್ಶೇಖ್ ಅವರು ಬರುವ ಶುಕ್ರವಾರದಂದು ಸಭೆಯಲ್ಲಿ ತಬ್ಲಿಗಿ ಮತ್ತು ದಾವಾಹ್ ಗುಂಪಿನ ಕುರಿತು ಎಚ್ಚರಿಕೆ ನೀಡುವಂತೆ ಅಲ್ಲಿನ ಬೋಧಕರಿಗೆ ಹಾಗೂ ಮಸೀದಿಗಳಿಗೆ ವಿಶೇಷ ಸೂಚನೆ ನೀಡಿದ್ದಾರೆ. * ಸೌದಿ ಸರ್ಕಾರವು ಈ ತಬ್ಲಿಗಿ ಜಮಾತ್ ನಿಷೇದಿಸುವದರಿಂದ ಸಮಾಜಕ್ಕೆ ಅಪಾಯ, ದಾರಿ ತಪ್ಪಿಸುವುದು, ಹಾಗೂ ಭಯೋತ್ಪಾದನೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ, ಹಾಗೂ ಇದರ ಮಾಹಿತಿಯನ್ನು ಜನರಿಗೆ ನೀಡುವಂತೆ ಮಸೀದಿಗಳಿಗೆ ಸೂಚನೆಯನ್ನು ರವಾನಿಸಿದೆ. * ತಬ್ಲೀಘಿ ಜಮಾತ್'ನ ಮಾಹಿತಿ: ತಬ್ಲೀಘಿ ಜಮಾತ್'ನ್ನು 'ಪ್ರಚಾರ ಪಕ್ಷ' ಅಥವಾ 'ಉಪದೇಶ ಮಾಡುವ ಪಕ್ಷ' ಎಂದೂ ಅನುವಾದಿಸಲಾಗಿದೆ, ಅಷ್ಟೇ ಅಲ್ಲದೇ ಇದೊಂದು ಬಹುರಾಷ್ಟ್ರೀಯ ಸುನ್ನಿ ಇಸ್ಲಾಮಿಕ್ ಮಿಷನರಿ ಚಳುವಳಿಯಾಗಿದೆ, ಹಾಗೂ ಇದು ಇಸ್ಲಾಮಿಕ್ ಪ್ರವಾದಿ ಮುಹಮ್ಮದ್'ರ ಹಾಗೆ ಮುಸ್ಲಿಮರನ್ನು ಉತ್ತೇಜಿಸಲು ಹಾಗೂ ತಮ್ಮ ಧರ್ಮವನ್ನು ಅಭ್ಯಾಸ ಮಾಡಲು ಸಹ ಸದಸ್ಯರನ್ನು ಪ್ರೋತ್ಸಾಹಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. * ತಬ್ಲೀಘಿ ಜಮಾತ್ ಸಂಸ್ಥೆಯು ವಿಶ್ವಾದ್ಯಂತ 350 ರಿಂದ 400 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ, ಅಷ್ಟೇ ಅಲ್ಲದೇ ಇದೊಂದು '20ನೇ ಶತಮಾನದ ಇಸ್ಲಾಂನಲ್ಲಿ ಅತ್ಯಂತ ಪ್ರಭಾವಶಾಲಿ ಧಾರ್ಮಿಕ ಚಳುವಳಿಗಳಲ್ಲಿ ಈ ಚಳುವಳಿ ಕೂಡ ಒಂದಾಗಿದೆ, ಇದನ್ನು 1926 ರಲ್ಲಿ ಭಾರತದ ಮೇವಾತ್ ಪ್ರದೇಶದಲ್ಲಿ ಚಿಸ್ತಿ ತಾರಿಖಾದ ಸೂಫಿ ಮುಹಮ್ಮದ್ ಇಲ್ಯಾಸ್ ಅಲ್-ಕಂಧ್ಲಾವಿ ಅವರು ಸ್ಥಾಪಿಸಿದ್ದಾರೆ, ಇದೊಂದು ದೇವಬಂದಿ ಚಳುವಳಿಯ ಶಾಖೆಯಾಗಿ ಆರಂಭವಾಗಿದೆ, ಹಾಗೂ ಇದು ಇಸ್ಲಾಂ ಧರ್ಮದ ಅಂಶಗಳ ಆಂದೋಲನವು ತಳಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಇಸ್ಲಾಂ ಧರ್ಮದ ಆಧ್ಯಾತ್ಮಿಕ ಸುಧಾರಣೆ ಮಾಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.