Job Description: * ಇದೀಗ ಭೋಪಾಲ್ ಮತ್ತು ಇಂದೋರ್ನಲ್ಲಿ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ಜಾರಿಗೆ ತರಲು ಮಧ್ಯಪ್ರದೇಶ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ. * ಈ ಎರಡೂ ನಗರಗಳು ಇದೀಗ ಎಡಿಜಿ(ADG) ಶ್ರೇಣಿಯ ಪೊಲೀಸ್ ಕಮಿಷನರ್ಗಳನ್ನು ಪಡೆಯುತ್ತವೆ ಎಂದು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ಎರಡೂ ಜಿಲ್ಲೆಗಳ ಪೊಲೀಸ್ ಕಮಿಷನರ್ಗಳಿಗೆ '2' ಐಜಿ(IG) ಶ್ರೇಣಿಯ ಅಧಿಕಾರಿಗಳು, ಹಾಗೂ '9' ಎಸ್ಪಿ(SP) ಶ್ರೇಣಿಯ ಅಧಿಕಾರಿಗಳು ಸಹಾಯ ಮಾಡಲಿದ್ದಾರೆ. * ಈ ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಅಡಿಯಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಹಾಗೂ ಅವರ ಸುರಕ್ಷತೆಗಾಗಿ ಎಸ್ಪಿ(SP) ಶ್ರೇಣಿಯ ಮಹಿಳಾ ಅಧಿಕಾರಿಗಳನ್ನೂ ನಿಯೋಜನೆ ಮಾಡಲಾಗುವದು ಎಂದು ತಿಳಿಸಿದ್ದಾರೆ. * ಈ ಹಿಂದೆ 2012 ರ ಏಪ್ರಿಲ್'ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್ ಮತ್ತು ಇಂದೋರ್ನಲ್ಲಿ ಪೊಲೀಸ್ ಕಮಿಷನರ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವದು ಎಂದು ಘೋಷಣೆ ಮಾಡಿದ್ದರು.