Job Description: * ಪದ್ಮಶ್ರೀ ಪುರಸ್ಕೃತ ಹೊನ್ನಳ್ಳಿಯ ತುಳಸಿ ಗೌಡ ಅವರಿಗೆ 'ಹಾರ್ಮನಿ ಫೌಂಡೇಶನ್' ವತಿಯಿಂದ 'ಮದರ್ ತೆರೇಸಾ' ಪ್ರಶಸ್ತಿ ಪ್ರದಾನ. * ಡಿಸೆಂಬರ್ 13 ರಂದು ಬೆಳಿಗ್ಗೆ 11 ಘಂಟೆಗೆ ಮುಂಬಯಿಯಲ್ಲಿ ಪದ್ಮಶ್ರೀ ಪುರಸ್ಕೃತ ಹೊನ್ನಳ್ಳಿಯ ತುಳಸಿ ಗೌಡ ಅವರಿಗೆ 'ಮದರ್ ತೆರೇಸಾ' ಪ್ರಶಸ್ತಿ ಪ್ರದಾನ ಮಾಡಲಾಗುವದು. * ಮದರ್ ತೆರೇಸಾ ನೆನಪಿಗಾಗಿ 2005 ರಲ್ಲಿ ಕೋಲ್ಕತ್ತಾದಲ್ಲಿ ಜನ್ಮ ತಾಳಿದ 'ಹಾರ್ಮನಿ ಫೌಂಡೇಶನ್' ಎಂಬ ಸಂಸ್ಥೆಯು ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತಿಯನ್ನು ಗಳಿಸಿದೆ. * 'ಹಾರ್ಮನಿ ಫೌಂಡೇಶನ್' ಸಂಸ್ಥೆಯು ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಕಾರ್ಯವನ್ನು ಮಾಡುತ್ತ ಬಂದಿರುತ್ತದೆ. * 'ಹಾರ್ಮನಿ ಫೌಂಡೇಶನ್' ನ ಸಂಸ್ಥಾಪಕ ಅಧ್ಯಕ್ಷರು ಅಬ್ರಾಹಮ್ ಮಥಾಯಿ ಅವರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜರುಗಲಿದೆ. * ಪ್ರಶಸ್ತಿಗೆ ಆಯ್ಕೆಯಾದ ಪ್ರಮುಖರ ಸಾಮಾಜಿಕ ಕರ್ತವ್ಯಗಳು :- * ಶ್ರೀಮತಿ ಆದ್ಯ ಜೋಶಿ - ಮಕ್ಕಳ ಹವಾಮಾನ ಪ್ರಶಸ್ತಿ 2020 ರ ಪುರಸ್ಕೃತೆ: ದಿ ರೈಟ್ ಗ್ರೀನ್ ಉಪಕ್ರಮದ ಪ್ರವರ್ತಕ ಮತ್ತು ಸಂಸ್ಥಾಪಕಿಯಾಗಿರುವ * ಪಾನಿ ಫೌಂಡೇಶನ್ - ಪರಿಸರ ಮತ್ತು ಆರ್ಥಿಕವಾಗಿ ಸಮೃದ್ಧವಾಗಿರುವ ಬರ-ಮುಕ್ತ ಮಹಾರಾಷ್ಟ್ರವನ್ನು ರಚಿಸಲು ಅವರ ನಿಸ್ವಾರ್ಥ ಮತ್ತು ಅಸಾಧಾರಣ ಧ್ಯೇಯವನ್ನು ಹೊಂದಿರುವ ಸಂಸ್ಥೆಯಾಗಿರುವ ಕಾರಣ ಸಂಸ್ಥೆಯನ್ನು ಪ್ರಶಸ್ತಿ ಪ್ರದಾನ ಕಾರ್ಯಕ್ಕೆ ಆಯ್ಕೆ ಮಾಡಲಾಗಿರುತ್ತದೆ. * ಶ್ರೀ ಸುಬೋಜಿತ್ ಮುಖರ್ಜಿ - ಮುಂಬೈ ಮತ್ತು ಅದರ ಸುತ್ತಮುತ್ತಲಿನ ಹಸಿರು ಹೊದಿಕೆಯನ್ನು ವರ್ಧಿಸಲು ಅವರು ಮಾಡಿದ ಪ್ರಯತ್ನಗಳಿಗಾಗಿ ಮತ್ತು ಜಲ ರಕ್ಷಕರಾಗಿ, ವಿವಿಧ ಆವಿಷ್ಕಾರವನ್ನು ಬಳಸಿ ಮಳೆನೀರು ಕೊಯ್ಲು ಮಾಡುವಲ್ಲಿ ಅವರು ಮಾಡಿದ ಪ್ರಯತ್ನಗಳಿಗಾಗಿ ಇವರನ್ನು ಆಯ್ಕೆ ಮಾಡಲಾಗಿರುತ್ತದೆ. * ಪದ್ಮಶ್ರೀ ಪುರಸ್ಕೃತ ಹೊನ್ನಳ್ಳಿಯ ತುಳಸಿ ಗೌಡ - ಮರಗಳ ಸಂರಕ್ಷಣೆಯ ಮೂಲಕ ಅವರು ಸಮಾಜಕ್ಕೆ ನೀಡಿದ ಅದ್ಭುತ ಮತ್ತು ಸ್ಪೂರ್ತಿದಾಯಕ ಕೊಡುಗೆಗಾಗಿ ಮತ್ತು ಅದರ ಬಗ್ಗೆ ಅವರ ಅದ್ಭುತವಾದ ಸಾಂಪ್ರದಾಯಿಕ ಜ್ಞಾನಕ್ಕಾಗಿ ಇವರನ್ನು ಆಯ್ಕೆ ಮಾಡಲಾಗಿರುತ್ತದೆ.