Job Description: * ಇತ್ತೀಚಿಗಷ್ಟೇ ಬ್ಲೂ ಒರಿಜಿನ್ ಕಂಪನಿ ವತಿಯಿಂದ ನಿಯೋಜಿಸಲಾಗಿದ್ದ 3 ನೇ ಆವೃತ್ತಿಯ ಗಗನಯಾತ್ರೆ ಯಶಸ್ವಿಯಾಗಿ ಹಮ್ಮಿಕೊಂಡಿದ್ದಾರೆ, ಈ ಬ್ಲೂ ಒರಿಜಿನ್ ಕಂಪನಿಯನ್ನು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸ್ಥಾಪಿಸಿದ್ದಾರೆ. * ಬ್ಲೂ ಒರಿಜಿನ್ ಕಂಪನಿ ನಿಯೋಜಿಸಿದ್ದ 3 ನೇ ಆವೃತ್ತಿಯ ಗಗನಯಾತ್ರೆಗೆ, ಈ ಹಿಂದೆ 1961 ರಲ್ಲಿ ಮೊದಲ ಬಾರಿಗೆ ಗಗನಯಾತ್ರೆ ಹಮ್ಮಿಕೊಂಡಿದ್ದ ಅಲೆನ್ ಶೆಪರ್ಡ್ ಅವರ ಪುತ್ರಿ ಲಾರಾ ಶೆಪರ್ಡ್ ಚರ್ಚ್ಲೇ ಸೇರಿ ಈ ಬಾರಿ '6' ಜನರು ಗಗನಯಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ. * ಅಲೆನ್ ಶೆಪರ್ಡ್ಅವರು ಅಮೇರಿಕದ ಮೊದಲ ಗಗನಯಾತ್ರಿಯಾಗಿದ್ದಾರೆ. * ಹವಾಮಾನ ಅಡಚಣೆಗಳಿಂದಾಗಿ ಈ ಪ್ರವಾಸವನ್ನು ಎರಡು ದಿನಗಳ ಕಾಲ ವಿಳಂಬ ಮಾಡಿ ಈ ಗಗನಯಾತ್ರೆಯನ್ನು ಅಮೇರಿಕದ ಟೆಕ್ಸಸ್ನ ವ್ಯಾನ್ ಹಾರ್ನ್ ಎಂಬ ಪ್ರದೇಶದಿಂದ ಈ ಗಗನಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಯಿತು. * ಪ್ರಸ್ತುತ ಬಾಹ್ಯಾಕಾಶ ಪ್ರವಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಲಾನ್ ಮಸ್ಕ್ ಅವರ SpaceX ಕಂಪನಿ ಉದ್ಯಮಿ ರಿಚರ್ಡ್ ಬ್ರ್ಯಾನ್ಸನ್, ವರ್ಜಿನ್ ಅಟ್ಲಾಂಟಿಕ್, ಹಾಗೂ ಇನ್ನು ಇಬ್ಬರನ್ನು ಗಗನಯಾತ್ರೆಗೆ ಕಳುಹಿಸಿತ್ತು. * ಬ್ಲೂ ಒರಿಜಿನ್ ಕಂಪನಿಯ ಮಾಹಿತಿ: ಪ್ರಸ್ತುತ ಬ್ಲೂ ಒರಿಜಿನ್ ಕಂಪನಿ LLC ಯು ಅಮೇರಿಕದ ಖಾಸಗಿ ಅನುದಾನಿತ ಏರೋಸ್ಪೇಸ್ ತಯಾರಕ, ಹಾಗೂ ಉಪ-ಕಕ್ಷೆಯ ಬಾಹ್ಯಾಕಾಶ ಹಾರಾಟ ಸೇವೆಗಳ ಕಂಪನಿಯಾಗಿದೆ, ಈ ಕಂಪನಿ ಅಮೇರಿಕದ ಕೆಂಟ್, ವಾಷಿಂಗ್ಟನ್ನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. * ಈ ಬ್ಲೂ ಒರಿಜಿನ್ ಕಂಪನಿಯನ್ನು ಅಮೆಜಾನ್ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾದ ಜೆಫ್ ಬೆಜೋಸ್ ಅವರು ಈ ಹಿಂದೆ 2000 ರಲ್ಲಿ ಸ್ಥಾಪಿಸಿದ್ದಾರೆ. * ಪ್ರಸ್ತುತ ಬಾಬ್ ಸ್ಮಿತ್ ಅವರು ಈ ಕಂಪನಿಯು CEO ಆಗಿದ್ದಾರೆ, ಈ ಮೊದಲು 2003 ರಿಂದ 2017 ರವರೆಗೆ ಬ್ಲೂ ಒರಿಜಿನ್ ಸಂಸ್ಥೆಯನ್ನು ರಾಬ್ ಮೆಯೆರ್ಸನ್ ಮುನ್ನಡೆಸಿದರು, ಹಾಗೂ ಇವರು ಈ ಕಂಪನಿಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. * ಬ್ಲೂ ಒರಿಜಿನ್ ಕಕ್ಷೆಯ ತಂತ್ರಜ್ಞಾನ, ರಾಕೆಟ್-ಚಾಲಿತ ವರ್ಟಿಕಲ್ ಟೇಕ್ಆಫ್ ಮತ್ತು ವರ್ಟಿಕಲ್ ಲ್ಯಾಂಡಿಂಗ್ (VTVL) ವಾಹನಗಳನ್ನು ಸಬ್ಆರ್ಬಿಟಲ್ ಮತ್ತು ಆರ್ಬಿಟಲ್ ಬಾಹ್ಯಾಕಾಶಕ್ಕೆ ಪ್ರವೇಶ ಪಡೆಯಲು ಅಭಿವೃದ್ಧಿಪಡಿಸುತ್ತದೆ, ಹಾಗೂ ಈ ಕಂಪನಿಯು ಏಪ್ರಿಲ್ 2015 ರಲ್ಲಿ ಹಾರಾಟದ ಪರೀಕ್ಷೆಯುನ್ನು ಆರಂಭಿಸಿತ್ತು. ಅಷ್ಟೇ ಅಲ್ಲದೇ ಈ ಕಂಪನಿಯು ಜುಲೈ 20, 2021 ರಂದು ತನ್ನ ಮೊದಲ ಸಿಬ್ಬಂದಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿಸಿದೆ.