Job Description: * ಇದೀಗ ವಿಶ್ವದ ಮಾಜಿ ನಂ.1 ಶೂಟರ್ ದಿವ್ಯಾಂಶ್ ಪನ್ವಾರ್ ಅವರು ಪುರುಷರ 10 ಮೀ. ಏರ್ ರೈಫಲ್ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ, ಸೀನಿಯರ್ ಹಾಗೂ ಜೂನಿಯರ್ ಏರ್ ರೈಫಲ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. * ರೈಫಲ್ ಇವೆಂಟ್ನ 64 ನೇ ಆವೃತ್ತಿಯ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್'ನ ಅಂತಿಮ ಸುತ್ತಿನಲ್ಲಿ ರಾಜಸ್ಥಾನದ ದಿವ್ಯಾಂಶ್ ಪನ್ವಾರ್ ಅವರು 250 ಸ್ಕೋರ್ ಕಲೆ ಹಾಕುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. * ಮಹಾರಾಷ್ಟ್ರದರುದ್ರಾಂಕ್ಷ್ ಬಾಲಾಸಾಹೇಬ್ ಪಾಟೀಲ್ ಅವರು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. * ಅಸ್ಸಾಂ ನ ಹೃದಯ್ ಹಝಾರಿಕ ಅವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. * ರಾಜಸ್ಥಾನದ ದಿವ್ಯಾಂಶ್ ಪನ್ವಾರ್ ಅವರು ಜೂನಿಯರ್ ಶೂಟಿಂಗ್ ಫೈನಲ್ನಲ್ಲಿ 252.2 ಅಂಕಗಳನ್ನೂ ಕಲೆ ಹಾಕುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.