Job Description: * ಪ್ರಸ್ತುತ ಉಜ್ಬೇಕಿಸ್ತಾನ್ ರಾಜಧಾನಿ ತಾಷ್ಕೆಂಟ್ ನಡೆಯುತ್ತಿರುವ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನ 67 ಕೆಜಿ ವಿಭಾಗದಲ್ಲಿ ಭಾರತೀಯ ಜೆರೆಮಿ ಲಾಲ್ರಿನ್ವಾಂಗ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ, ಹಾಗೂ ಕರ್ನಾಟಕ ರಾಜ್ಯದ ಗುರುರಾಜ್ ಪೂಜಾರಿ ಅವರು 61 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಭಾರತೀಯ ಜೆರೆಮಿ ಅವರು ಈ ಸ್ಪರ್ಧೆಯಲ್ಲಿ 305 ಕೆಜಿ ಭಾರ ಎತ್ತುವ ಮೂಲಕ ಸ್ನ್ಯಾಚ್ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು, ಈ ಹಿಂದೆ ಇವರೇ 2019 ರಲ್ಲಿ 306 ಕೆಜಿ ಭಾರ ಎತ್ತುವ ಮೂಲಕ ಸಾಧನೆ ಮಾಡಿದ್ದರು. * ಜೆರೆಮಿ ಅವರು 2018 ರ ಯೂತ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು. * ಕರ್ನಾಟಕ ರಾಜ್ಯದ ಕುಂದಾಪುರ ನಗರದ ಗುರುರಾಜ ಪೂಜಾರಿ ಈ ಸ್ಪರ್ಧೆಯಲ್ಲಿ 265 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. * ಈ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಎಸ್.ವಿದ್ಯಾರಾಣಿ ಅವರು 55 ಕೆಜಿ ವಿಭಾಗದಲ್ಲಿ 198 ಕೆಜಿ ಭಾರವನ್ನು ಎತ್ತಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.