Job Description: * ಪ್ರಸ್ತುತ ಬಾಲಿವುಡ್'ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಇದೀಗ ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರನ್ನು ಒಳಗೊಂಡಿರುವ 'ಲೆಜೆಂಡ್ಸ್ ಲೀಗ್ ಕ್ರಿಕೆಟ್'ಗೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. * ಇದೀಗ ಲೆಜೆಂಡ್ಸ್ ಲೀಗ್ ಆಡಳಿತ ಮಂಡಳಿಯು ಅಮಿತಾಬ್ ಬಚ್ಚನ್ ಅವರೊಡನೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿಯನ್ನು ಬಹಿರಂಗ ಪಡಿಸಿದೆ. * ಪ್ರಸ್ತುತ ಭಾರತ, ಏಷ್ಯಾ, ಹಾಗೂ ವಿಶ್ವ ಇತರೆ ತಂಡಗಳ ಮಧ್ಯೆ ನಡೆಯಲಿರುವ ಲೆಜೆಂಡ್ಸ್ ಲೀಗ್ ನ ಪಂದ್ಯಗಳಿಗೆ ಒಮನ್ನ ಅಲ್ ಅಮೆರತ್ ಕ್ರೀಡಾಂಗಣವು ಮುಂಬರುವ ಜನೇವರಿಯಲ್ಲಿ ಆತಿಥ್ಯವನ್ನು ವಹಿಸಲಿದೆ ಎಂದು ಲೆಜೆಂಡ್ಸ್ ಲೀಗ್ ಆಡಳಿತ ಮಂಡಳಿ ತಿಳಿಸಿದೆ.