Job Description: * ಪ್ರಸ್ತುತ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ನಥನ್ ಲಿಯಾನ್ ಅವರು ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲಿ 400 ನೇ ವಿಕೆಟ್ ಪಡೆದು ದಾಖಲೆಯನ್ನು ಬರೆದಿದ್ದಾರೆ. * ನಥನ್ ಲಿಯಾನ್ ಅವರು ಇತ್ತೀಚಿಗೆ ನಡೆದ ಗಾಬಾ ಟೆಸ್ಟ್'ನಲ್ಲಿ ಇಂಗ್ಲೆಂಡ್'ನ ಡೇವಿಡ್ ಮಲಾನ್ ಅವರ ವಿಕೆಟ್ ಪಡೆದುಕೊಂಡಿದ್ದಾರೆ, ಇದು ಇವರ 400 ನೇ ವಿಕೆಟ್ ನ ಸಾಧನೆಯಾಗಿದೆ. * ಈ ಮೊದಲು ಆಸ್ಟ್ರೇಲಿಯಾದ ಶೇನ್ ವಾರ್ನ್, ಹಾಗೂ ಗ್ಲೆನ್ ಮೆಕ್ ಗ್ರಾತ್ ಅವರು 400 ಕ್ಕೂ ಅಧಿಕ ವಿಕೆಟ್'ಗಳನ್ನೂ ಪಡೆದು ಸಾಧನೆ ಮಾಡಿದ್ದಾರೆ, ಇದೀಗ ಇವರ ಸಾಲಿಗೆ 400 ವಿಕೆಟ್ ಪಡೆದ 3ನೇ ಬೌಲರ್ ಆಗಿ ನಥನ್ ಲಿಯಾನ್ ಅವರು ಹೊರ ಹೊಮ್ಮಿದ್ದಾರೆ. * ನಥನ್ ಲಿಯಾನ್ ಅವರು ತಮ್ಮ 101 ನೇ ಟೆಸ್ಟ್ ಪಂದ್ಯದಲ್ಲಿ ಈ 400 ವಿಕೆಟ್ ಗಳ ಸಾಧನೆ ಮಾಡಿದ್ದಾರೆ. * ಆಸ್ಟ್ರೇಲಿಯಾ ತಂಡದ ಶೇನ್ ವಾರ್ನ್ ಅವರು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 708 ವಿಕೆಟ್ ಕಬಳಿಸಿದ್ದಾರೆ, ಹಾಗೂ ಮೆಕ್ ಗ್ರಾತ್ ಅವರು ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 563 ವಿಕೆಟ್ ಗಳನ್ನು ಪಡೆದಿದ್ದಾರೆ.